Select Your Language

Notifications

webdunia
webdunia
webdunia
webdunia

1996ರಲ್ಲಿ ಪಾಕಿಸ್ತಾನದ ಮ್ಯಾಚ್ ಫಿಕ್ಸಿಂಗ್ ಉತ್ತಂಗದಲ್ಲಿತ್ತು: ಶೋಯಿಬ್ ಅಖ್ತರ್

1996ರಲ್ಲಿ ಪಾಕಿಸ್ತಾನದ ಮ್ಯಾಚ್ ಫಿಕ್ಸಿಂಗ್ ಉತ್ತಂಗದಲ್ಲಿತ್ತು: ಶೋಯಿಬ್ ಅಖ್ತರ್
ಕರಾಚಿ , ಮಂಗಳವಾರ, 18 ಅಕ್ಟೋಬರ್ 2016 (16:17 IST)
ಕಳೆದ 1996ರಲ್ಲಿ ಮ್ಯಾಚ್ ಫಿಕ್ಸಿಂಗ್ ತುಂಬಾ ಉತ್ತಂಗದಲ್ಲಿತ್ತು. ಆದರೆ, ಅದೃಷ್ಟವಶಾತ್ ನಾನು ಮ್ಯಾಚ್‌ ಫಿಕ್ಸಿಂಗ್‌‌ನಿಂದ ದೂರ ಉಳಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್ ಹೇಳಿದ್ದಾರೆ.  
ಪಾಕಿಸ್ತಾನದ ಕ್ರಿಕೆಟಿಗರ ಡ್ರೆಸ್ಸಿಂಗ್ ಕೋಣೆಯಲ್ಲಿ ಮ್ಯಾಚ್‌ಫಿಕ್ಸಿಂಗ್‌ ಹಾವಳಿ ತಾರಕಕ್ಕೇರಿತ್ತು. ಅಂತಹ ಕೆಟ್ಟ ವಾತಾವರಣ ನಾನು ಯಾವತ್ತೂ ನೋಡಿರಲಿಲ್ಲ ಎಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
 
ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್, ನಾನು ಸದಾ ಮ್ಯಾಚ್ ಫಿಕ್ಸಿಂಗ್ ಕ್ರಿಕೆಟಿಗರಿಂದ ದೂರವಿರುತ್ತಿದ್ದೆ. ಪಾಕ್ ಕ್ರಿಕೆಟಿಗರು ಇಂತಹ ಮ್ಯಾಚ್ ಫಿಕ್ಸಿಂಗ್‌ನಿಂದ ದೂರವಿರುವುದು ಸೂಕ್ತ ಎಂದು ಸಲಹೆ ನೀಡಿದರು.
 
ಕಳೆದ 2010ರಲ್ಲಿ ಮೊಹಮ್ಮದ್ ಆಮೀರ್‌ಗೆ ಕೂಡಾ ಮ್ಯಾಚ್ ಫಿಕ್ಸಿಂಗ್‌ನಿಂದ ದೂರವಿರುವಂತೆ ಸಲಹೆ ನೀಡಿದ್ದೆ. ಮ್ಯಾಚ್ ಫಿಕ್ಸಿಂಗ್‌ ದಲ್ಲಾಳಿಗಳು ಕ್ರಿಕೆಟಿಗರಿಗೆ ಹಣ ಮತ್ತು ಹೆಣ್ಣಿನ ಆಸೆ ತೋರಿಸಿ ಮ್ಯಾಚ್ ಫಿಕ್ಸಿಂಗ್ ಖೆಡ್ಡಾಗೆ ಕೆಡುವುತ್ತಾರೆ ಎಂದರು.
 
ಮೊಹಮ್ಮದ್ ಆಮೀರ್ ಮ್ಯಾಚ್ ಫಿಕ್ಸಿಂಗ್‌ನಿಂದ ಐದು ವರ್ಷಗಳ ಕಾಲ ಅಮಾನತ್ತು ಅನುಭವಿಸಬೇಕಾಯಿತು. ಇದೀಗ ಮತ್ತೆ ತಂಡಕ್ಕೆ ಮರಳಿದ್ದಾರೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕಬಡ್ಡಿ ವಿಶ್ವಕಪ್: ಭಾರತಕ್ಕೆ ಇಂದು ಇಂಗ್ಲೆಂಡ್ ಎದುರಾಳಿ