Select Your Language

Notifications

webdunia
webdunia
webdunia
webdunia

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಿಟ್ನೆಸ್ ಉಳಿಸಿಕೊಂಡಿರುವ ಧೋನಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಿಟ್ನೆಸ್ ಉಳಿಸಿಕೊಂಡಿರುವ ಧೋನಿ
ನವದೆಹಲಿ , ಬುಧವಾರ, 15 ಜೂನ್ 2016 (16:19 IST)
ನವದೆಹಲಿ: ಭಾರತದ ಕಿರು ಓವರುಗಳ ನಾಯಕ ಮಹೇಂದ್ರ ಸಿಂಗ್ ಧೋನಿ 35 ವರ್ಷಗಳಾಗಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಫಿಟ್ ಆಗಿರುವ ಕ್ರಿಕೆಟಿಗರಾಗಿ ಉಳಿದಿದ್ದಾರೆ. ಈ ವರ್ಷ ಅವರು ಸ್ವಲ್ಪಮಟ್ಟಿಗೆ ಫಾರಂ ಕಳೆದುಕೊಂಡಿದ್ದರೂ ಕೂಡ ಅವರ ವಿಕೆಟ್ ಮಧ್ಯೆ ಓಡುವ ವೇಗವೇನೂ ಕಡಿಮೆಯಾಗಿಲ್ಲ.

ಧೋನಿ ಅವರು ಕಿರು ಓವರುಗಳ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಬೇಕೆಂದು ಅನೇಕ ಹಿರಿಯ ಆಟಗಾರರು ಒತ್ತಾಯಿಸುತ್ತಿದ್ದಾರೆ. ಆದರೆ ಅವರನ್ನು ನಾಯಕತ್ವದಿಂದ ತೆಗೆಯುವುದಕ್ಕೆ ಯಾವುದೇ ಬಲವಾದ ಕಾರಣ ಸಿಗುತ್ತಿಲ್ಲ. ಏಕೆಂದರೆ ಜಿಂಬಾಬ್ವೆ ವಿರುದ್ಧ ಏಕ ದಿನ ಪಂದ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡುವ ಹಾದಿಯಲ್ಲಿದ್ದಾರೆ.


ಇದಲ್ಲದೇ ಸಿಕ್ಸರ್‌ಗಳನ್ನು ಹೊಡೆಯುವ ಪರಿ ನೋಡಿದಾಗ ಮತ್ತು ವಿಕೆಟ್ ಮಧ್ಯೆ ಓಡುವ ರಭಸಕ್ಕೆ ಅವರು ಈಗಲೂ ಉಳಿಸಿಕೊಂಡಿರುವ ಫಿಟ್ನೆಸ್ ಕಾಣಿಕೆ ನೀಡಿದೆ.  ಧೋನಿ ಈ ಫಿಟ್ನೆಸ್ ಉಳಿಸಿಕೊಂಡಿರುವುದಕ್ಕೆ  ಅವರು ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವುದು ಕಾರಣವಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಜಿಂಬಾಬ್ವೆ 123 ರನ್‌ಗೆ ಆಲೌಟ್