ಈ ವರ್ಷಾಂತ್ಯದೊಳಗೆ ಚುನಾವಣೆ ಹಾಗೂ ವಾರ್ಷಿಕ ಸಾಮಾನ್ಯ ಸಭೆ ನಡೆಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ನ್ಯಾಯಮೂರ್ತಿ ಲೋಧಾ ನೇತೃತ್ವದ ಆಯೋಗ ಸೂಚನೆ ನೀಡಿದೆ.
ಸುಪ್ರೀಕೋರ್ಟ್ ನೇಮಿಸಿರುವ ಲೋಧಾ ಆಯೋಗ ಭಾನುವಾರ ಸಭೆ ನಡೆಸಿ ಈ ನಿರ್ಧಾರವನ್ನು ಕೈಗೊಂಡಿದೆ.
ಡಿಸೆಂಬರ್ 15ರೊಳಗೆ ಚುನಾವಣೆ ಹಾಗೂ ವಾರ್ಷಿಕ ಸಾಮಾನ್ಯ ಸಭೆ ನಡೆಸಬೇಕು. ಡಿಸೆಂಬರ್ 30ರೊಳಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ಗೆ ನೂತನ ಆಡಳಿಕ ಮಂಡಳಿ ರಚನೆಯಾಗಬೇಕು ಮತ್ತು ವಿವಿಧ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸಬೇಕು ಎಂದು ಸಮಿತಿ ಬಿಸಿಸಿಐಗೆ ಆದೇಶಿಸಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ