ಮುಂಬೈ: ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಗೆ ಕರೆ ಮಾಡಿ ಏಕದಿನ ಸರಣಿ ನಡೆಯುವುದೇ ಅನುಮಾನ ಎಂದು ಬಿಸಿಸಿಐನ ಪ್ರಸ್ತುತ ಸ್ಥಿತಿ ಬಗ್ಗೆ ಫಿಟ್ಟಿಂಗ್ ಇಟ್ಟಿದ್ದ ಪದಚ್ಯುತ್ ಕಾರ್ಯದರ್ಶಿ ಅಜಯ್ ಶಿರ್ಕೆಗೆ ಲೋಧಾ ಸಮಿತಿ ತಕ್ಕ ಶಾಸ್ತಿ ಮಾಡಿದೆ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸದಸ್ಯರೂ ಆಗಿರುವ ಶಿರ್ಕೆ ಇನ್ನು ಮುಂದೆ ಆ ಕ್ರಿಕೆಟ್ ಮಂಡಳಿಯ ಸಭೆಯಲ್ಲೂ ಭಾಗವಹಿಸುವಂತಿಲ್ಲ ಎಂದು ಫರ್ಮಾನು ಹೊರಡಿಸಿದೆ. ಬಿಸಿಸಿಐ ಕೇಳಿದ ಕೆಲವು ಅನುಮಾನಗಳಿಗೆ ಉತ್ತರಿಸಿದ ಲೋಧಾ ಸಮಿತಿ ಶಿರ್ಕೆಯನ್ನೂ ರಾಜ್ಯ ಸಂಸ್ಥೆಯಿಂದಲೂ ಗೇಟ್ ಪಾಸ್ ನೀಡಲು ಬೇಕಾದ ವ್ಯವಸ್ಥೆ ಮಾಡಿಕೊಂಡಿದೆ.
ಇದರಿಂದಾಗಿ ಶಿರ್ಕೆ ಈಗ ಸಂಪೂರ್ಣ ಮೂಲೆಗುಂಪಾಗಲಿದ್ದಾರೆ. ಅತ್ತ ಬೆಂಗಳಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿಗೆ ಕೂಡಾ ಶುಭ ಸಮಾಚಾರವಿಲ್ಲ. ಗಂಗೂಲಿ ಈಗಿನ ಅಧಿಕಾರಾವಧಿ ಮುಗಿಸಿ ಮೂರು ವರ್ಷ ಕಡ್ಡಾಯವಾಗಿ ಕ್ರಿಕೆಟ್ ನಿಂದ ದೂರವಿರಬೇಕು ಎಂದು ಲೋಧಾ ಸಮಿತಿ ಸೂಚಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ