Webdunia - Bharat's app for daily news and videos

Install App

ಪಾಕಿಸ್ತಾನದ ಲೆಜೆಂಡ್ ಬ್ಯಾಟ್ಸ್‌ಮನ್ ಹನೀಫ್ ಮೊಹ್ಮದ್ ನಿಧನ

Webdunia
ಗುರುವಾರ, 11 ಆಗಸ್ಟ್ 2016 (20:30 IST)
ಪಾಕಿಸ್ತಾನದ ಲೆಜೆಂಡರಿ ಬ್ಯಾಟ್ಸ್‌ಮನ್ ಹನೀಫ್ ಮೊಹ್ಮದ್ ಗುರುವಾರ ಶ್ವಾಸಕೋಶದ ಕ್ಯಾನ್ಸರ್‌ನ ಸುದೀರ್ಘ ಬೇನೆಯ ಬಳಿಕ ಮೃತಪಟ್ಟಿದ್ದು ಅವರಿಗೆ 81 ವರ್ಷಗಳಾಗಿತ್ತು. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು ಮತ್ತು ಉಸಿರಾಟದ ಸಮಸ್ಯೆಗಳ ನಿವಾರಣೆಗೆ ವೆಂಟಿಲೇಟರ್ ಅಳವಡಿಸಲಾಗಿತ್ತು.

ಆದರೆ ಇಂದು ನಿಧನರಾಗಿದ್ದಾರೆಂದು ಆಗಾ ಖಾನ್ ಆಸ್ಪತ್ರೆ ವಕ್ತಾರ ತಿಳಿಸಿದರು. ಹನೀಫ್ ಅವರು ವೈದ್ಯಕೀಯವಾಗಿ ಮೃತಪಟ್ಟಿದ್ದಾರೆಂದು 6 ನಿಮಿಷಗಳ ಕಾಲ ಘೋಷಿಸಿದ ಬಳಿಕ ಅವರ ಹೃದಯಬಡಿತ ಪುನಃ ಆರಂಭವಾಗಿ ಜೀವಂತ ಉಳಿದಿದ್ದರು. ಆದರೆ ಕೆಲವು ಗಂಟೆಗಳ ಬಳಿಕ ತಮ್ಮ ತಂದೆ ಮೃತಪಟ್ಟಿದ್ದಾರೆಂದು ಶೋಯಬ್ ಘೋಷಿಸಿದ್ದಾರೆ.
 
ತಮ್ಮ ತಂದೆ ಕಳೆದ ಕೆಲವು ವಾರಗಳಿಂದ ತೀವ್ರ ನೋವಿನಿಂದ ಕೂಡಿದ್ದರೂ, ಅವರ ಹೋರಾಟದ ಮನೋಭಾವದಿಂದ ಮನಸ್ಸು ಬಿಗಿಹಿಡಿದಿದ್ದರು ಎಂದು ಶೋಯಬ್ ಹೇಳಿದರು.
 
1954/55 ರಲ್ಲಿ ಭಾರತಕ್ಕೆ ತೆರಳಿದ ಮೊದಲ ಪಾಕಿಸ್ತಾನ ಪ್ರವಾಸಿ ಟೆಸ್ಟ್ ತಂಡದಲ್ಲಿ ಹನೀಫ್ ಆಡಿದ್ದರು. ಬಳಿಕ 55 ಟೆಸ್ಟ್‌ಗಳನ್ನು ಆಡಿದ್ದರಲ್ಲದೇ ವೆಸ್ಟ್ ಇಂಡೀಸ್ ವಿರುದ್ಧ 337 ರನ್ ಬೃಹತ್ ಸ್ಕೋರ್ ದಾಖಲಿಸಿದ್ದರು. ಇದು ಟೆಸ್ಟ್ ಇತಿಹಾಸದಲ್ಲಿ ಸುದೀರ್ಘ ಇನ್ನಿಂಗ್ಸ್ ಆಗಿ ಉಳಿದಿದೆ. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಅವ್ನೀತ್ ಕೌರ್ ಫೋಟೋ ಲೈಕ್ ಮಾಡಿದ್ದ ಕೊಹ್ಲಿ, ಪೂಸಿ ಹೊಡೆದರೂ ಅನುಷ್ಕಾ ಕರಗುತ್ತಿಲ್ವಂತೆ

Team India: ಕೊಹ್ಲಿ ಅಲ್ಲ, ಬುಮ್ರಾ ಅಲ್ಲ ಟೀಂ ಇಂಡಿಯಾ ಹೊಸ ಕ್ಯಾಪ್ಟನ್ ಇವರೇ

ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

ಮುಂದಿನ ಸುದ್ದಿ
Show comments