ಶ್ರೀಲಂಕಾದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಸಂಗಕ್ಕರಾ ಮತ್ತು ಜಯವರ್ಧನೆ ನಿವೃತ್ತಿ ಬಳಿಕ ಶ್ರೀಲಂಕಾ ಬ್ಯಾಟಿಂಗ್ ಶಕ್ತಿ ದುರ್ಬಲವಾಗಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಕುಶಾಲ್ ಮೆಂಡಿಸ್ ಅವರ ಬ್ಯಾಟಿಂಗ್ ಪರಾಕ್ರಮವು ಶ್ರೀಲಂಕಾ ಕ್ರಿಕೆಟ್‌ಗೆ ಮರುಜೀವ ತುಂಬಿದೆ.
ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್‌ಗೆ 86 ರನ್ ಲೀಡ್ ಬಿಟ್ಟುಕೊಟ್ಟು ಎರಡನೇ ಇನ್ನಿಂಗ್ಸ್‌ನಲ್ಲಿ 6ಕ್ಕೆ 2 ವಿಕೆಟ್ ಉರುಳಿದ್ದಾಗ ಪಾಲೆಕೆಲೆ ಮೈದಾನದಲ್ಲಿ ಬ್ಯಾಟಿಂಗ್‌ಗೆ ಇಳಿದ ಮೆಂಡಿಸ್ ತಮ್ಮ ಬ್ಯಾಟಿಂಗ್ ಕೌಶಲ ಪ್ರದರ್ಶಿಸಿ ಮಳೆಯಿಂದ ಪಂದ್ಯ ನಿಂತಾಗ 243 ಎಸೆತಗಳಲ್ಲಿ ಅಜೇಯ 196 ರನ್ ಗಳಿಸಿದ್ದರು.
ಶ್ರೀಲಂಕಾ ನಾಲ್ಕು ವಿಕೆಟ್ ಉಳಿದಿರುವಂತೆ 196 ರನ್ ಮುಂದಿತ್ತು. ಬೌಲರ್ ಪ್ರಾಬಲ್ಯದ ಆಟದಲ್ಲಿ ಬೇರಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸಲು ತಿಣುಕಾಡುವಾಗ ಮೆಂಡಿಸ್ ಚೊಚ್ಚಲ ಟೆಸ್ಟ್ ಶತಕ ಗಳಿಸಿದರು.
ಸ್ಟಾರ್ ಬ್ಯಾಟ್ಸ್‌ಮನ್ ಸಂಗಕ್ಕರಾ ಕೂಡ ಮೆಂಡಿಸ್ ಬ್ಯಾಟಿಂಗ್ ಕೌಶಲ್ಯವನ್ನು ಮನೋಜ್ಞ ಬ್ಯಾಟಿಂಗ್ ಎಂದು ಹೊಗಳಿದ್ದಾರೆ. ಜಯವರ್ದನೆ ಕೂಡ ತಮ್ಮ ಅಭಿನಂದನೆಗಳನ್ನು ತಿಳಿಸಿ ಟ್ವೀಟ್ ಮಾಡಿದ್ದಾರೆ.
ಒಂದು ಕೊನೆಯಲ್ಲಿ ವಿಕೆಟ್‌ಗಳು ಉರುಳುತ್ತಿದ್ದಂತೆ ಮೆಂಡಿಸ್ ಪರಿಪೂರ್ಣ ಬ್ಯಾಟಿಂಗ್ ಕೌಶಲ್ಯ ತೋರಿಸಿ ಚಾಂಡಿಮಾಲ್ ಜತೆ 117 ರನ್ ಜತೆಯಾಟ ಹಾಗೂ ಧನಂಜಯ ಡಿಸಿಲ್ವ ಜತೆ 71 ರನ್ ಜತೆಯಾಟವಾಡಿದರು.
ಬಲಗೈ ಆಟಗಾರ ತಂಡದ ಮೊತ್ತದಲ್ಲಿ ಶೇ. 60ರಷ್ಟು ಕೊಡುಗೆ ನೀಡಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಇಡೀ ತಂಡ ಗಳಿಸಿದ್ದಕ್ಕಿಂತ 52 ರನ್ ಹೆಚ್ಚಿಗೆ ಗಳಿಸಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.