ಹೆಡ್ ಕೋಚ್ ಅನಿಲ್ ಕುಂಬ್ಳೆ ಬೌಲರ್ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರಾದ್ದರಿಂದ ಪಂದ್ಯದ ಪರಿಸ್ಥಿತಿಗಳಲ್ಲಿ ಬೌಲರುಗಳಿಗೆ ಸರಿಯಾದ ಉತ್ತೇಜನ ಒದಗಿಸುತ್ತಾರೆ ಎಂದು ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಹೇಳಿದ್ದಾರೆ. ಬೌಲರ್ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಸವಾಲಿನದ್ದಾಗಿದೆ ಎಂದು ಅಶ್ವಿನ್ ಹೇಳಿದರು. ನೀವು ಚೆನ್ನಾಗಿ ಬೌಲ್ ಮಾಡುತ್ತಿದ್ದು ವಿಕೆಟ್ ಉರುಳದಿದ್ದರೆ, ನಿಮ್ಮ ಭುಜದ ಮೇಲೆ ಕೈಹಾಕಿ ನೀನು ಹೀಗೆ ಮಾಡಬೇಕೆಂದು ಬಯಸುವುದಾಗಿ ಕುಂಬ್ಳೆ ಹೇಳುತ್ತಾರೆ.
ನಾವು ಸೆಲೆಬ್ರಿಟಿಗೆ ಅತೀ ಹತ್ತಿರ ಹೋದಾಗ ನಿರಾಶೆಯಾಗುತ್ತದೆಂಬ ನಾಣ್ನುಡಿಯಿದೆ. ಆದರೆ ಅನಿಲ್ ಭಾಯಿಗೆ ಸಂಬಂಧಿಸಿದಂತೆ ದೂರದಿಂದ ನಾನು ಎಣಿಕೆ ಮಾಡಿದ್ದು ನಿಜವಾಗಿದೆ ಎಂದರು.
ಅವರು ಅದೇ ವ್ಯಕ್ತಿ, ಅದೇ ಶಿಸ್ತು, ಅದೇ ತೀವ್ರತೆಯಿಂದ ಕೂಡಿದ್ದಾರೆ. ಅವರು ತಂಡದಲ್ಲಿ ಶಕ್ತಿ ಮತ್ತು ಸೂಕ್ಷ್ಮ ವಿವರಗಳನ್ನು ತುಂಬಿದ್ದಾರೆ. ಇವೆಲ್ಲವನ್ನು ನಾನು ಅವರಿಂದ ನಿರೀಕ್ಷಿಸಿದ್ದು, ಅದೆಲ್ಲಾ ನಿಜವಾಗಿದೆ ಎಂದು ಅಶ್ವಿನ್ ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.