ವಿರಾಟ್ ಕೊಹ್ಲಿ ಅಭಿಮಾನಿ ಎನ್ನುತ್ತಲೇ ಭಾರತೀಯರಿಗೇ ಸೋಲುಣಿಸಿದಳು!

Webdunia
ಸೋಮವಾರ, 26 ಮಾರ್ಚ್ 2018 (05:01 IST)
ಮುಂಬೈ: ಡೇನಿಯಲ್ ವ್ಯಾಟ್ ಎಂಬ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಬ್ಯಾಟ್ಸ್ ವುಮನ್ ಗೆ ವಿರಾಟ್ ಕೊಹ್ಲಿ ಎಂದರೆ ಭಾರೀ ಇಷ್ಟ. ಬಹಿರಂಗವಾಗಿಯೇ ಕೊಹ್ಲಿಗೆ ಪ್ರಪೋಸ್ ಮಾಡಿದಾಕೆ ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ  ಪಾಲಿಗೆ ವಿಲನ್ ಆಗಿಬಿಟ್ಟರು.

ನಿನ್ನೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಪಂದ್ಯದಲ್ಲಿ ಭಾರತದ ಮಹಿಳೆಯರು ದಾಖಲೆಯ 198 ರನ್ ಗಳಿಸಿದ್ದರು. ಈ ಮೊತ್ತ ಬೆಂಬತ್ತುವುದು ಕಷ್ಟವೆಂದೇ ಎಲ್ಲರೂ ಅಂದುಕೊಂಡಿದ್ದರು. ಭಾರತದ ಪರ ಮತ್ತೆ ಸ್ಮೃತಿ ಮಂದಣ್ಣ 40 ಬಾಲ್ ಗಳಲ್ಲಿ ಅತೀ ವೇಗದ 76 ರನ್ ಗಳಿಸಿ ಹೀರೋಯಿನ್ ಆದರು.

ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದ್ದು ಕೊಹ್ಲಿ ಅಭಿಮಾನಿ ವ್ಯಾಟ್. ಆರಂಭಿಕರಾಗಿ ಕಣಕ್ಕಿಳಿದ ವ್ಯಾಟ್ ಕೇವಲ 64 ಬಾಲ್ ಗಳಲ್ಲಿ 15 ಬೌಂಡರಿ, 5 ಸಿಕ್ಸರ್ ಗಳ ನೆರವಿನಿಂದ 124 ಚಚ್ಚಿದರು. ಆ ಮೂಲಕ ಬ್ಯಾಟಿಂಗ್ ನಲ್ಲೂ ತಾನೂ ಕೊಹ್ಲಿಯಂತೇ ಚೇಸಿಂಗ್ ವೀರ ಎಂದು ಸಮರ್ಥಿಸಿದರು. ಕೊಹ್ಲಿ ಇದೇ ರೀತಿ ಚೇಸಿಂಗ್ ಸಂದರ್ಭ ಬಂದರೆ ಮೈ ಮೇಲೆ ಭೂತ ಹೊಕ್ಕವರಂತೆ ಚಚ್ಚುತ್ತಾರೆ. ಅದೇ ರೀತಿ ವ್ಯಾಟ್ ಕೂಡಾ ಭಾರತೀಯ ದಾಳಿಯ ಪುಡಿಗಟ್ಟಿ ತಮ್ಮ ತಂಡಕ್ಕೆ 7 ವಿಕೆಟ್ ಗಳ ದಾಖಲೆಯ ಗೆಲುವು ಕೊಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊದಲ ಮದುವೆಯ ವರ್ಷದೊಳಗೆ ಎರಡನೇ ಮದುವೆಯಾದ ಅಫ್ಘಾನ್ ಕ್ರಿಕೆಟರ್ ರಶೀದ್ ಖಾನ್‌

ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್‌ : ಚಿನ್ನಸ್ವಾಮಿಯಿಂದಲೇ ಪಂದ್ಯಗಳು ಶಿಫ್ಟ್‌ ಸಾಧ್ಯತೆ

ಪಾಕ್‌ ವೇಗಿ ನಸೀಮ್‌ ಶಾ ಮನೆ ಮೇಲೆ ಗುಂಡಿನ ದಾಳಿ: ಕಾರಣವನ್ನು ಬಿಚ್ಚಿಟ್ಟ ಪೊಲೀಸರು

ದೇಶೀಯ ಕ್ರಿಕೆಟ್ ಆಡಿ ಎಂದು ಆರ್ಡರ್ ಮಾಡಿದ ಬಿಸಿಸಿಐ: ಅದಕ್ಕೂ ರೆಡಿ ಎಂದ ರೋಹಿತ್ ಶರ್ಮಾ

ಇದೇ ಕಾರಣಕ್ಕೆ ನೆಚ್ಚಿನ ಚೆನ್ನೈ ತಂಡವನ್ನೂ ತೊರೆಯಲು ಸಿದ್ಧರಾದ್ರಾ ರವೀಂದ್ರ ಜಡೇಜಾ

ಮುಂದಿನ ಸುದ್ದಿ
Show comments