ಕೊಹ್ಲಿಯ ತಲೆನೋವಿಗೆ ಕೆಎಲ್ ರಾಹುಲ್ ತಲೆದಂಡವಾಗುತ್ತಾ?!

Webdunia
ಶನಿವಾರ, 2 ಡಿಸೆಂಬರ್ 2017 (08:29 IST)
ನವದೆಹಲಿ: ಶ್ರೀಲಂಕಾ ವಿರುದ್ಧ ಇಂದಿನಿಂದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ನಾಯಕ ಕೊಹ್ಲಿಗೆ ಆರಂಭಿಕರನ್ನು ಆರಿಸುವ ಚಿಂತೆ ಆವರಿಸಿದೆ.
 

ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಶಿಖರ್ ಧವನ್ ತಂಡಕ್ಕೆ ಮರಳಿದ್ದಾರೆ. ಇದರ ನಡುವೆ ಧವನ್ ಸ್ಥಾನದಲ್ಲಿ ಆಡಿದ ಮುರಳಿ ವಿಜಯ್ ಶತಕ ಸಿಡಿಸಿದ್ದಾರೆ. ಅತ್ತ ಕೆಎಲ್ ರಾಹುಲ್ ಕೂಡಾ ಎರಡು ಅರ್ಧಶತಕ ಸಿಡಿಸಿದ್ದಾರೆ.

ಹೀಗಿರುವಾಗ ಯಾರನ್ನು ಆರಿಸುವುದು, ಯಾರನ್ನು ಬಿಡುವುದು ಎಂಬ ತಲೆನೋವು ಕೊಹ್ಲಿಗೆ ಎದುರಾಗಿದೆ. ಆದರೆ ಮುರಳಿ ವಿಜಯ್ ತಾವು ಯಾವುದಕ್ಕೂ ಸಿದ್ಧ. ನಾವು ಮೂವರೂ ಮೈದಾನದ ಹೊರಗೆ ಒಳ್ಳೆಯ ಸ್ನೇಹಿತರು. ಹೀಗಾಗಿ ಒಬ್ಬರಿಗಾಗಿ ಒಬ್ಬರು ಸ್ಥಾನ ಬಿಟ್ಟುಕೊಡಲು ಬೇಸರಿಸುವುದಿಲ್ಲ ಎಂದಿದ್ದಾರೆ.

 ಆದರೆ ಏಕದಿನ ಪಂದ್ಯದಲ್ಲಿ ಸ್ಥಾನ ಕಳೆದುಕೊಂಡಿರುವ ಕೆಎಲ್ ರಾಹುಲ್ ಮತ್ತೆ ಟೆಸ್ಟ್ ತಂಡದಲ್ಲೂ ಪೈಪೋಟಿಯಿಂದಾಗಿ ಅನುಭವಿ ಮುರಳಿ ವಿಜಯ್ ಗಾಗಿ ಸ್ಥಾನ ಬಿಡಬೇಕಾಗುತ್ತಾ? ಅಥವಾ ಧವನ್ ಮತ್ತೆ ಹೊರಗುಳಿಯುತ್ತಾರಾ ಎಂಬ ಪ್ರಶ್ನೆಗೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಚಿನ್ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ

ರೋಹಿತ್ ಶರ್ಮಾ ದಾಖಲೆ ಮುರಿದ ಸರ್ಫರಾಜ್ ಖಾನ್: ಬಿಸಿಸಿಐಗೆ ಹೊಸ ಸಂಕಷ್ಟ ತಂದೊಡ್ಡಿದ ಮುಂಬೈ ಬ್ಯಾಟರ್‌

ಮೊಹಮ್ಮದ್ ಶಮಿ ವಿಚಾರದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಮುಂದಾದ ಬಿಸಿಸಿಐ

INDW vs SLW: ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ದಾಖಲೆ ಮಾಡಿದ ದೀಪ್ತಿ ಶರ್ಮಾ: ಸರಣಿ ಕ್ಲೀನ್ ಸ್ವೀಪ್

ಮತ್ತೇ ಈ ವಿಚಾರವಾಗಿ ಸುದ್ದಿಗೆ ಕಾರಣವಾದ ಎಂಎಸ್ ಧೋನಿ ಪತ್ನಿ ಸಾಕ್ಷಿ

ಮುಂದಿನ ಸುದ್ದಿ
Show comments