ಪರ್ತ್: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೋಟೆಲ್ ರೂಂಗೆ ನುಗ್ಗಿ ವಿಡಿಯೋ ವೈರಲ್ ಮಾಡಿದ ಹೋಟೆಲ್ ಸಿಬ್ಬಂದಿ ವಿರುದ್ಧ ದೂರು ನೀಡಲು ಕೊಹ್ಲಿ ನಿರಾಕರಿಸಿದ್ದಾರೆ.
ಇದಕ್ಕೆ ಕಾರಣವೂ ಇದೆ. ಕ್ರೌನ್ ಪರ್ತ್ ಹೋಟೆಲ್ ಈಗಾಗಲೇ ಸಿಬ್ಬಂದಿಯನ್ನು ವಜಾಗೊಳಿಸಿ ವಿಚಾರಣೆಗೆ ಆದೇಶಿಸಿದೆ. ಜೊತೆಗೆ ಘಟನೆಗೆ ಬಹಿರಂಗ ಕ್ಷಮೆಯನ್ನೂ ಕೇಳಿದೆ.
ಈ ಬಗ್ಗೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ದೂರು ದಾಖಲಿಸುವಂತೆ ಕೊಹ್ಲಿಗೆ ಸಲಹೆ ನೀಡಿತ್ತು. ಆದರೆ ಇದನ್ನು ನಿರಾಕರಿಸಿರುವ ಕೊಹ್ಲಿ ಈ ವಿಚಾರವನ್ನು ಇನ್ನಷ್ಟು ಮುಂದುವರಿಸುವುದು ಬೇಡ ಎಂದಿದ್ದಾರೆ ಎಂದು ತಿಳಿದುಬಂದಿದೆ.
-Edited by Rajesh Patil