Publish Date: Wed, 15 Mar 2017 (10:40 IST)
Updated Date: Wed, 15 Mar 2017 (10:42 IST)
ನವದೆಹಲಿ: ನಿಮ್ಮ ಇಂಟರ್ನೆಟ್ ಪೇಜ್ ನಲ್ಲಿ ಗೂಗಲ್ ತೆರೆದ ಕೂಡಲೇ ಇಂದು ಕ್ರಿಕೆಟ್ ಆಡುವ ಚಿತ್ರವೊಂದು ಮೂಡಿ ಬರುತ್ತಿದೆ. ನಿನ್ನೆಯ ತನಕ ಹೋಳಿ ಹಬ್ಬದ ಚಿತ್ರವಿತ್ತು. ಇಂದು ಸಡನ್ ಆಗಿ ಕ್ರಿಕೆಟಿಗರ ಚಿತ್ರವೇಕೆ ಗೊತ್ತಾ?
ಕಾರಣ ಇಂದು ಟೆಸ್ಟ್ ಕ್ರಿಕೆಟ್ ಆರಂಭವಾಗಿ 140 ವರ್ಷವಾಗಿದೆ. ಈ ಸಂಭ್ರಮದ ದಿನದಂದು ಗೂಗಲ್ ಈ ಚಿತ್ರ ತನ್ನ ಮುಖಪುಟದಲ್ಲಿ ಹಾಕಿಕೊಂಡು ಟೆಸ್ಟ್ ಕ್ರಿಕೆಟ್ ಗೆ ಗೌರವ ಸಲ್ಲಿಸುತ್ತಿದೆ. ಮಾರ್ಚ್ 15, 1877 ರಂದು ಆಸ್ಟ್ರೇಲಿಯಾ ಎಂಸಿಜಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು.
ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದು ಇತಿಹಾಸ ನಿರ್ಮಿಸಿತ್ತು. ಅದೇ ದಿನದ ಸ್ಮರಣೆಗಾಗಿ ಗೂಗಲ್ ಒಂದು ಕ್ರಿಕೆಟ್ ಪಂದ್ಯದ ಚಿತ್ರಣ ನೀಡುವ ಫೋಟೋ ಪ್ರಕಟಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ