Webdunia - Bharat's app for daily news and videos

Install App

ರಾಹುಲ್, ಕೊಹ್ಲಿ, ಜಡೇಜಾ ಅರ್ಧಶತಕ: ಭಾರತ 364 ರನ್

Webdunia
ಶನಿವಾರ, 16 ಜುಲೈ 2016 (11:23 IST)
ಕೆ.ಎಲ್. ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರ ಅರ್ಧಶತಕಗಳ ನೆರವಿನಿಂದ ಭಾರತ ಡಬ್ಲ್ಯುಐಸಿಬಿ ಅಧ್ಯಕ್ಷರ ಇಲೆವನ್ ಎರಡನೇ ಅಭ್ಯಾಸ ಪಂದ್ಯದ 2ನೇ ದಿನ ಉತ್ತಮ ಸ್ಥಿತಿಯಲ್ಲಿದೆ. ವೆಸ್ಟ್ ಇಂಡೀಸ್  ಮೊದಲ ಇನ್ನಿಂಗ್ಸ್180 ರನ್ ಸ್ಕೋರಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 364 ರನ್ ಸ್ಕೋರ್ ಕಲೆಹಾಕಿರುವ ಭಾರತ, ಅಧ್ಯಕ್ಷರ ಇಲೆವನ್ ಎರಡನೇ ಇನ್ನಿಂಗ್ಸ್‌ನಲ್ಲಿ 26ಕ್ಕೆ ಒಂದು ವಿಕೆಟ್ ಉರುಳಿಸಿದೆ. ದಿನದ ಕೊನೆಯ ಎಸೆತದಲ್ಲಿ ಅಶ್ವಿನ್ ಲಿಯಾನ್ ಜಾನ್ಸನ್ ಅವರನ್ನು ಔಟ್ ಮಾಡಿದರು.
 
ಇದಕ್ಕೆ ಮುಂಚೆ 93ಕ್ಕೆ 3 ವಿಕೆಟ್‌ಗಳೊಂದಿಗೆ ದಿನದಾಟ ಮುಂದುವರಿಸಿದ ಟೀಂ ಇಂಡಿಯಾ ಪರ ರಾಹುಲ್ ಮತ್ತು ಕೊಹ್ಲಿ ಮೊದಲ ಸೆಷನ್‌ನಲ್ಲಿ 88 ರನ್ ಸೇರಿಸಿದರು. ಅರ್ಧಶತಕ ಸ್ಕೋರ್ ಮಾಡಿದ ಕೊಹ್ಲಿ ಲಂಚ್ ಬಳಿಕ ಔಟಾದರು. ರಹಾನೆ ಚೆನ್ನಾಗಿ ಆಡುವಂತೆ ಕಂಡುಬಂದರೂ 32 ರನ್‌ಗಳಾಗಿದ್ದಾಗ ರಕೀಮ್ ಕಾರ್ನ್ವಾಲ್ ಎಸೆತಕ್ಕೆ ಔಟಾದರು. ಅಧ್ಯಕ್ಷರ ಇಲೆವನ್ ತಂಡವನ್ನು 180ಕ್ಕೆ ಆಲೌಟ್ ಮಾಡುವಲ್ಲಿ ಕಾರಣಕರ್ತರಾದ ಜಡೇಜಾ 56 ರನ್ ಸಿಡಿಸಿದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 184 ರನ್ ಲೀಡ್ ಗಳಿಸಿದೆ.
ಸ್ಕೋರು ವಿವರ: 
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್- 180 ರನ್ ಆಲೌಟ್
ಭಾರತ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್: 364ಕ್ಕೆ ಆಲೌಟ್ 
ಮುರಳಿ ವಿಜಯ್: 23 ರನ್, ಲೋಕೇಶ್ ರಾಹುಲ್ 64 ರನ್, ವಿರಾಟ್ ಕೊಹ್ಲಿ 51 ರನ್, ರಹಾನೆ 32 ರನ್, ವೃದ್ದಿಮಾನ್ ಸಹಾ 31 ರನ್,  ರವೀಂದ್ರ ಜಡೇಜಾ: 56 ರನ್
 ವೆಸ್ಟ್ ಇಂಡೀಸ್ ಬೌಲಿಂಗ್ ವಿವರ: 
ಹೋಲ್ಡರ್ 1 ವಿಕೆಟ್, ಜಾಸನ್ ಡೇವ್ಸ್ 1 ವಿಕೆಟ್, ಕಾರ್ನ್ವಾಲ್ 5 ವಿಕೆಟ್‌ಗಳು
 ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ 26ಕ್ಕೆ ವಿಕೆಟ್
 ಜಾನ್ಸನ್ 17  ಕ್ಯಾಂಪ್‌ಬೆಲ್ ಅಜೇಯ 9
ಬೌಲಿಂಗ್ ವಿವರ
ಅಶ್ವಿನ್ 1 ವಿಕೆಟ್

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಪಂದ್ಯ ನಿಂತ್ರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಿರಾಕಲ್‌ಗೆ ಕೊಹ್ಲಿ ಅಭಿಮಾನಿಗಳು ಫುಲ್ ಖುಷ್‌, Video Viral

Bengaluru Rain: ಇಂದಿನ KKR vs RCB ಪಂದ್ಯಾಟದ ಟಿಕೆಟ್ ಖರೀದಿಸಿದವರಿಗೆ ಬಿಗ್ ಶಾಕ್‌

ನೀರಜ್‌ ಚೋಪ್ರಾ ಹೊಸ ಮೈಲಿಗಲ್ಲು: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

ಮುಂದಿನ ಸುದ್ದಿ
Show comments