Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಓಪನರ್ ಆದರೆ ಸಕ್ಸಸ್ ಆಗ್ತಾರಾ: ಅಂಕಿ ಅಂಶ ಇಲ್ಲಿದೆ

KL Rahul

Krishnaveni K

ಸಿಡ್ನಿ , ಮಂಗಳವಾರ, 12 ನವೆಂಬರ್ 2024 (09:23 IST)
ಸಿಡ್ನಿ: ಮುಂಬರುವ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯಿದೆ. ರಾಹುಲ್ ಆರಂಭಿಕರಾಗಿ ವಿದೇಶಗಳಲ್ಲಿ ಎಷ್ಟು ಯಶಸ್ಸು ಕಂಡಿದ್ದಾರೆ ಇಲ್ಲಿದೆ ಅಂಕಿ ಅಂಶ.

ಆಸ್ಟ್ರೇಲಿಯಾ ಅಂಕಣ ರಾಹುಲ್ ಗೆ ಹೊಸತೇನಲ್ಲ. ತಮ್ಮ ವೃತ್ತಿ ಜೀವನದ ಆರಂಭದಲ್ಲೇ ರಾಹುಲ್ ಆಸ್ಟ್ರೇಲಿಯಾ ನೆಲದಲ್ಲಿ ಆಡಿ ಶತಕ ಗಳಿಸಿದವರು. ಹಾಗೆ ನೋಡಿದರೆ ಆರಂಭಿಕರಾಗಿ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ ನಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಆದರೆ ಈಗ ಅವರು ಕಳಪೆ ಫಾರ್ಮ್ ನಲ್ಲಿರುವುದೇ ತಂಡಕ್ಕೆ ಚಿಂತೆಯಾಗಿದೆ.

ವಿದೇಶಗಳಲ್ಲಿ ಓಪನರ್ ಆಗಿ ಟೆಸ್ಟ್ ಕ್ರಿಕೆಟ್ ನಲ್ಲಿ ರಾಹುಲ್ 29 ಪಂದ್ಯಗಳನ್ನಾಡಿದ್ದಾರೆ. ಒಟ್ಟು 51 ಇನಿಂಗ್ಸ್ ಆಡಿರುವ ಅವರು 1682 ರನ್ ಗಳಿಸಿದ್ದಾರೆ. ಅವರು 32.98 ಸರಾಸರಿ ಹೊಂದಿದ್ದಾರೆ. ಇದು ವಿದೇಶೀ ನೆಲದಲ್ಲಿ ಓಪನರ್ ಆಗಿ ಅವರ ಸಾಧನೆ. ಅದರಲ್ಲಿ ಆರು ಶತಕ ಮತ್ತು ಐದು ಅರ್ಧಶತಕವೂ ಸೇರಿದೆ.

ಓಪನರ್ ಆಗಿ ವಿದೇಶದಲ್ಲಿ 158 ರನ್ ಗಳಿಸಿದ್ದು ಅವರ ಗರಿಷ್ಠ ಸಾಧನೆ. ಆದರೆ ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಹಾಗಿದ್ದರೂ ಓಪನರ್ ಆಗಿ ಅವರು ಗಳಿಸಿದ ಶತಕಗಳ ಸಂಖ್ಯೆ ನೋಡಿದರೆ ವಿದೇಶೀ ನೆಲದಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದಾರೆ ಎಂದೇ ಹೇಳಬಹುದು. ಇದೀಗ ಮತ್ತೆ ತಮ್ಮ ಮೆಚ್ಚಿನ ಓಪನಿಂಗ್ ಸ್ಥಾನಕ್ಕೆ ಬಂದರೆ ಅವರು ಯಶಸ್ಸು ಸಾಧಿಸಬಹುದು ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲವೇ ದಿನ ಮುಂಬೈನಲ್ಲಿದ್ದು ಪತ್ನಿ, ಮಕ್ಕಳ ಜೊತೆ ವಿರಾಟ್ ಕೊಹ್ಲಿ ಹೋಗಿದ್ದು ಈ ದೇಶಕ್ಕೆ