ಟೆಸ್ಟ್ ನಲ್ಲಿ ಜೀರೋ ಆಗಿದ್ದ ಕೆಎಲ್ ರಾಹುಲ್ ಮೊದಲ ಏಕದಿನದಲ್ಲಿ ಹೀರೋ

Webdunia
ಶುಕ್ರವಾರ, 17 ಮಾರ್ಚ್ 2023 (20:40 IST)
Photo Courtesy: Twitter
ಮುಂಬೈ: ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ಸ್ಥಾನ ಕಳೆದುಕೊಂಡಿದ್ದ ಕೆಎಲ್ ರಾಹುಲ್ ಇಂದು ಟೀಂ ಇಂಡಿಯಾ ಪಾಲಿಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಪತ್ ಬಾಂಧವರಾದರು.

ರವೀಂದ್ರ ಜಡೇಜಾ ಜೊತೆಗೂಡಿದ ಕೆಎಲ್ ರಾಹುಲ್ ರನ್ ಗಳ ಜೊತೆಯಾಟವಾಡಿ ತಂಡಕ್ಕೆ ಗೆಲುವು ಕೊಡಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 35.4 ಓವರ್ ಗಳಲ್ಲಿ 188 ರನ್ ಗಳಿಗೆ ಆಲೌಟ್ ಆಯಿತು. ವೇಗಿಗಳಾದ ಮೊಹಮ್ಮದ್ ಶಮಿ, ಸಿರಾಜ್ ತಲಾ 3, ರವೀಂದ್ರ ಜಡೇಜಾ 2 ಮತ್ತು ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಕಬಳಿಸಿದರು. ಆಸೀಸ್ ಪರ ಮಿಚೆಲ್ ಮಾರ್ಚ್ 81 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭದಲ್ಲೇ ಇಶಾನ್ ಕಿಶನ್ ಕೈಕೊಟ್ಟರು. ಅದಾದ ಬಳಿಕ 5 ವಿಕೆಟ್ ಗಳನ್ನು ಟೀಂ ಇಂಡಿಯಾ ಬಹುಬೇಗನೇ ಕಳೆದುಕೊಂಡಿತ್ತು. ಒಂದು ಹಂತದಲ್ಲಿ 83 ರನ್ ಗಳಿಸಿದ್ದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.ಈ ಹಂತದಲ್ಲಿ ಜೊತೆಗೂಡಿದ ಕೆಎಲ್ ರಾಹುಲ್-ರವೀಂದ್ರ ಜಡೇಜಾ ಜೋಡಿ ಭಾರತವನ್ನು ಅಪಾಯದಿಂದ ಪಾರು ಮಾಡಿತು. ರಾಹುಲ್ 91 ಎಸೆತಗಳಿಂದ 75 ರನ್ ಗಳಿಸಿದರೆ ಜಡೇಜಾ 69 ಎಸೆತಗಳಿಂದ 45 ರನ್ ಗಳಿಸಿದರು. ಇದರಿಂದಾಗಿ ಭಾರತ 39.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸುವ ಮೂಲಕ ಕೊನೆಗೂ ಗೆಲುವು ಕಂಡಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

IND vs SA: ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕೋಚ್ ಆಗಿ ಬಂದಾಗ ರಾಹುಲ್ ದ್ರಾವಿಡ್ ಹೇಳಿದ್ದ ಈ ಮಾತು ಗಂಭೀರ್ ಗೂ ಪಾಠವಾಗಬೇಕು

ಮುಂದಿನ ಸುದ್ದಿ
Show comments