ಗಾಂಚಾಲಿ ಬಿಟ್ಟು ರಣಜಿಗೆ ಮರಳಿದ ಕಿಂಗ್‌ ಕೊಹ್ಲಿ: ದೆಹಲಿ ತಂಡದ ನಾಯಕತ್ವವನ್ನು ವಿರಾಟ್‌ ನಿರಾಕರಿಸಿದ್ದೇಕೆ

Sampriya
ಮಂಗಳವಾರ, 28 ಜನವರಿ 2025 (15:25 IST)
Photo Courtesy X
ದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 12 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ ಆಡಲಿದ್ದಾರೆ. ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ ದೆಹಲಿ ತಂಡದ ಪರ ವಿರಾಟ್ ಕೊಹ್ಲಿ ಆಡಲು ಸಜ್ಜಾಗಿದ್ದಾರೆ.

ಜನವರಿ 30 ರಿಂದ ದೆಹಲಿ ಮತ್ತು ರೈಲ್ವೇಸ್ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯಲಿದೆ. ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಈ ಪಂದ್ಯಕ್ಕಾಗಿ ವಿರಾಟ್ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಇದರ ಮಧ್ಯೆ ವಿರಾಟ್ ಕೊಹ್ಲಿ ದೆಹಲಿ ತಂಡದ ನಾಯಕತ್ವ ವಹಿಸಲು ಹಿಂದೇಟು ಹಾಕಿದ್ದಾರೆ.

ವಿರಾಟ್ ಕೊಹ್ಲಿ 12 ವರ್ಷಗಳ ನಂತರ ರಣಜಿ ಟ್ರೋಫಿ ಟೂರ್ನಿ ಅಖಾಡಕ್ಕಿಳಿದಿದ್ದಾರೆ. ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರಿಂದ ಕೊಹ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ, ಅವರು 25 ವರ್ಷದ ಕ್ರಿಕೆಟಿಗನ ನಾಯಕತ್ವದಲ್ಲಿ ಆಡಲಿದ್ದಾರೆ.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ​​ರಣಜಿ ಟ್ರೋಫಿ ಟೂರ್ನಿಯ ರೈಲ್ವೇಸ್ ವಿರುದ್ಧದ ಪಂದ್ಯಕ್ಕೆ ದೆಹಲಿಯ ನಾಯಕತ್ವವನ್ನು ವಹಿಸಲು ವಿರಾಟ್ ಕೊಹ್ಲಿಗೆ ಕೇಳಿದೆ. ಆದರೆ ಅವರು ರೈಲ್ವೇಸ್ ತಂಡದ ವಿರುದ್ಧ ದೆಹಲಿಯ ನಾಯಕತ್ವವನ್ನು ನಿರಾಕರಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ವಿರಾಟ್ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ.

 ಯುವ ಬಲಗೈ ಬ್ಯಾಟರ್ ಆಯುಷ್ ಬದೋನಿ ರೈಲ್ವೇಸ್ ವಿರುದ್ಧ ದೆಹಲಿ ತಂಡದ ನಾಯಕತ್ವ ವಹಿಸಲಿದ್ದಾರೆ. ಈ 25 ವರ್ಷದ ಆಟಗಾರನ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಆಯುಷ್ ದೆಹಲಿ ಪರ ದೇಶೀಯ ಕ್ರಿಕೆಟ್ ಆಡಿದರೆ, ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಾರೆ. ಇದೀಗ ದೆಹಲಿ ತಂಡದ ನಾಯಕನಾಗಿ ರಣಜಿ ಟ್ರೋಫಿ ಆಡಲಿದ್ದಾರೆ.

ಈ ಹಿಂದಿನ ಪಂದ್ಯದಲ್ಲಿ ಕತ್ತು ನೋವಿನ ಕಾರಣ ನೀಡಿ ವಿರಾಟ್‌ ಪಂದ್ಯದಿಂದ ದೂರ ಉಳಿದಿದ್ದರು. ಈಗ ಗಾಂಚಾಳಿ ಬಿಟ್ಟು ರಣಜಿ ಅಂಗಣಕ್ಕೆ ಮರಳಿದ್ದಾರೆ.

ಬಹುತೇಕ ಎಲ್ಲಾ ದೆಹಲಿ ತಂಡದ ಆಟಗಾರರು ಮೊದಲ ಬಾರಿಗೆ ಕೊಹ್ಲಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ದೆಹಲಿಯ ಮುಖ್ಯ ಕೋಚ್ ಸರನ್‌ದೀಪ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಕಸರತ್ತು ನಡೆದಿದೆ.

ದೆಹಲಿ ತಂಡ ಹೀಗಿದೆ: ಆಯುಷ್ ಬದೋನಿ (ನಾಯಕ), ವಿರಾಟ್ ಕೊಹ್ಲಿ, ಪ್ರಣವ್ ರಾಜವಂಶಿ (ವಿಕೆಟ್ ಕೀಪರ್), ಸನತ್ ಸಾಂಗ್ವಾನ್, ಅರ್ಪಿತ್ ರಾಣಾ, ಮಯಾಂಕ್ ಗುಸೇನ್, ಶಿವಂ ಶರ್ಮಾ, ಸುಮಿತ್ ಮಾಥುರ್, ವಂಶ್ ಬೇಡಿ (ವಿಕೆಟ್ ಕೀಪರ್), ಮಣಿ ಗ್ರೇವಾಲ್, ಹರ್ಷ್ ತ್ಯಾಗಿ, ಸಿದ್ಧಾಂತ್ ಶರ್ಮಾ, ನವದೀಪ್ ಸೈನಿ. , ಯಶ್ ಧುಲ್, ಗಗನ್ ವಾಟ್ಸ್, ಜಾಂಟಿ ಸಿಧು, ಹಿಮ್ಮತ್ ಸಿಂಗ್, ವೈಭವ್ ಕಂಡ್ಪಾಲ್, ರಾಹುಲ್ ಗೆಹ್ಲೋಟ್ ಮತ್ತು ಜಿತೇಶ್ ಸಿಂಗ್.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಮುಂದಿನ ಸುದ್ದಿ
Show comments