ವಿಶಾಖಪಟ್ಟಣ: ಭರ್ಜರಿ ಫಾರ್ಮ್ ನಲ್ಲಿದ್ದ ಕರ್ನಾಟಕಕ್ಕೆ ಹೀಗಾಗುತ್ತದೆಂದು ಯಾರೂ ಎಣಿಸಿರಲಿಕ್ಕಿಲ್ಲ. ನಿರೀಕ್ಷಿಸಿರದ ಆಘಾತ ನೀಡಿದೆ ತಮಿಳುನಾಡು ತಂಡ. ಹೀಗಾಗಿ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಏಳು ವಿಕೆಟ್ ಗಳಿಂದ ಸೋಲನುಭವಿಸಿದೆ.
ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲೂ ಅಂತಹ ಬ್ಯಾಟಿಂಗ್ ಪ್ರದರ್ಶನವನ್ನೇನೂ ತೋರಲಿಲ್ಲ. ಕೆಎಲ್ ರಾಹುಲ್ 77 ರನ್ ಗಳಿಸಿದ್ದು ಬಿಟ್ಟರೆ ಯಾರೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಮಧ್ಯಮ ಕ್ರಮಾಂಕದ ಮೂವರು ಬ್ಯಾಟ್ಸ್ ಮನ್ ಗಳು ಸೊನ್ನೆ ಸುತ್ತಿದ್ದು ರಾಜ್ಯಕ್ಕೆ ದುಬಾರಿಯಾಯ್ತು. ಇದರಿಂದಾಗಿ ಕೇವಲ 150 ರನ್ ಗಳಿಗೆ ಆಲೌಟ್ ಆಯಿತು.
ತಮಿಳುನಾಡು ಮೊದಲ ಇನಿಂಗ್ಸ್ ನಲ್ಲಿ 150 ರನ್ ಗಳಿಸಿತ್ತು. ಇದರಿಂದಾಗಿ 64 ರನ್ ಗಳ ಮುನ್ನಡೆ ಪಡೆಯಿತು. ಇದು ಕರ್ನಾಟಕಕ್ಕೆ ದುಬಾರಿಯಾಗಿ ಪರಿಣಮಿಸಿತು. ಗೆಲ್ಲಲು ಕೇವಲ 86 ರನ್ ಗಳ ಗುರಿ ಪಡೆದ ತಮಿಳುನಾಡು ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇದರೊಂದಿಗೆ ಭರ್ಜರಿ ಫಾರ್ಮ್ ನಲ್ಲಿದ್ದ ಕರ್ನಾಟಕಕ್ಕೆ ಮರ್ಮಾಘಾತವಾದಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ