Select Your Language

Notifications

webdunia
webdunia
webdunia
webdunia

ಕೊಹ್ಲಿ, ಡಿವಿಲಿಯರ್ಸ್ ಅಲ್ಲ, ಜೋಯ್ ರೂಟ್ ವಿಶ್ವದ ಶ್ರೇಷ್ಟ ಬ್ಯಾಟ್ಸ್‌ಮನ್: ಯುಸುಫ್

ಕೊಹ್ಲಿ, ಡಿವಿಲಿಯರ್ಸ್ ಅಲ್ಲ, ಜೋಯ್ ರೂಟ್ ವಿಶ್ವದ ಶ್ರೇಷ್ಟ ಬ್ಯಾಟ್ಸ್‌ಮನ್: ಯುಸುಫ್
ಲಂಡನ್ , ಮಂಗಳವಾರ, 26 ಜುಲೈ 2016 (16:47 IST)
ಇಂಗ್ಲೆಂಡ್ ಜೋಯ್ ರೂಟ್ ಪ್ರಸಕ್ತ ಜಗತ್ತಿನಲ್ಲಿ  ಶ್ರೇಷ್ಟ ಬ್ಯಾಟ್ಸ್‌ಮನ್ ಎಂದು ಪಾಕಿಸ್ತಾನದ ನಾಯಕ ಮೊಹಮ್ಮದ್ ಯುಸುಫ್ ಪಟ್ಟ ನೀಡಿದ್ದಾರೆ. ಜಗತ್ತಿನ ಕ್ರಿಕೆಟ್ ರಂಗದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಶ್ರೇಷ್ಟ ಬ್ಯಾಟ್ಸ್‌‍ಮನ್‌ಗಳು ಎಂಬ ಮಾತು ಕೇಳಿಬರುತ್ತಿರುವ ನಡುವೆ ರನ್ ಯಂತ್ರಗಳಾದ ಅವರನ್ನು ಕಡೆಗಣಿಸಿ ಜೋಯ್ ರೂಟ್‌ಗೆ ಈ ಪಟ್ಟವನ್ನು ಯುಸುಫ್ ನೀಡಿದ್ದಾರೆ. 
 
 ಮ್ಯಾಂಚೆಸ್ಟರ್‌ನ ಎರಡನೇ ಟೆಸ್ಟ್‌ನಲ್ಲಿ ಜೋಯ್ ರೂಟ್ 254 ಸ್ಮರಣೀಯ ರನ್ ಸ್ಕೋರ್ ಮಾಡಿದ ಬಳಿಕ ಅವರ ಬ್ಯಾಟಿಂಗ್‌ನಿಂದ ಮಾರುಹೋದ ಯುಸುಫ್ ರೂಟ್ ಶ್ರೇಷ್ಟ ಬ್ಯಾಟ್ಸ್‌ಮನ್ ಎಂದು ಶ್ಲಾಘಿಸಿದ್ದಾರೆ.  ರೂಟ್ ಅವರ ಸಮತೋಲನ, ಶಾಟ್ ಆಯ್ಕೆ ಮತ್ತು ಟೈಮಿಂಗ್ ಎಲ್ಲವೂ ಒಟ್ಟಿಗೆ ಸೇರಿದ್ದು, ಪಾಕ್ ವಿರುದ್ಧ ಅವರ ದ್ವಿಶತಕ ಇನ್ನಿಂಗ್ಸ್‌ನ ಮುತ್ತು ಎಂದು ಯುಸುಫ್ ಹೊಗಳಿದರು. ರೂಟ್ ಕ್ರಿಕೆಟ್‌ ರಂಗಕ್ಕೆ ಬಂದು  ಕೆಲವೇ ವರ್ಷಗಳಾಗಿದ್ದರೂ ಎಲ್ಲಾ ಮಾದರಿಗಳಲ್ಲಿ ಅವರ ಬ್ಯಾಟಿಂಗ್ ಸರಾಸರಿ ಅವರ ಶ್ರೇಷ್ಟತೆಯನ್ನು ರುಜುವಾತು ಮಾಡುತ್ತದೆ ಎಂದರು. 
 
ಪಾಕಿಸ್ತಾನದ ಬ್ಯಾಟಿಂಗ್ ಸಂಕಷ್ಟಕ್ಕೆ ಕಾರಣ ತಾವು ಭಿನ್ನ ಮಾದರಿಗಳಲ್ಲಿ ತಜ್ಞ ಬ್ಯಾಟ್ಸ್‌ಮನ್‌ಗಳ ಕೊರತೆ ಹೊಂದಿರುವುದು ಎಂದು ಯುಸುಫ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಆಸ್ಟ್ರೇಲಿಯಾವನ್ನು ಒಂದನೇ ನಂಬರ್ ಸ್ಥಾನದಿಂದ ಉರುಳಿಸಬಹುದು