ರಿಷಬ್ ಪಂತ್ ಅವರ ಮನೋಜ್ಞ ಅರ್ಧ ಶತಕದ ನೆರವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಲಯನ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಮೂರನೇ ಐಪಿಎಲ್ ಪಂದ್ಯದಲ್ಲಿ ಆಡುತ್ತಿರುವ ಪಂತ್, 40 ಎಸೆತಗಳಲ್ಲಿ 69 ರನ್ ಸಿಡಿಸುವ ಮೂಲಕ ಗಮನ ಸೆಳೆದರು. ಅವರ ಸ್ಕೋರಿನಲ್ಲಿ ನಾಲ್ಕು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳಿದ್ದವು. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೇರ್‌ಡೆವಿಲ್ಸ್ ತಂಡವು 150 ರನ್ ಗುರಿಯನ್ನು 16 ಎಸೆತಗಳು ಬಾಕಿಇರುವಂತೆಯೇ ಗುರಿಮುಟ್ಟಿತು.
18 ವರ್ಷ ವಯಸ್ಸಿನ ಬ್ಯಾಟ್ಸ್‌ಮನ್ ಪಂತ್ ಜೇಮ್ಸ್ ಫಾಕ್ನರ್ ಮತ್ತು ರೈನಾ ಬೌಲಿಂಗ್‌ನಲ್ಲಿ ಸಿಕ್ಸರ್ ಸೇರಿದಂತೆ ಕ್ವಿಂಟನ್ ಡಿ ಕಾಕ್ ಜತೆ ಆರಂಭಿಕ ವಿಕೆಟ್‌ಗೆ 115 ರನ್ ಜತೆಯಾಟವಾಡಿದರು. ಇದು ಲಯನ್ಸ್ ತಂಡವನ್ನು ಸೋಲಿನ ದವಡೆಗೆ ನೂಕಿ ಸತತ ಎರಡನೇ ಸೋಲನ್ನು ಲಯನ್ಸ್ ಅನುಭವಿಸಿತು.
ಇದಕ್ಕೆ ಮುಂಚೆ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ ಸುಭದ್ರ ಅರ್ಧ ಶತಕ ಬಾರಿಸಿ ಏಳುವಿಕೆಟ್‌ಗೆ 149 ರನ್ ಬಾರಿಸಿದರು. ಲಯನ್ಸ್ ಆರಂಭದಲ್ಲೇ 24ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಗೆ ತಲುಪಿತು. ಕಾರ್ತಿಕ್ ಮತ್ತು ಸುರೇಶ್ ರೈನಾ ಅವರ 51 ರನ್ ಜತೆಯಾಟದಿಂದ 150ರ ಗಡಿ ಸಮೀಪ ತರಲು ಸಾಧ್ಯವಾಯಿತು. ರವೀಂದ್ರ ಜಡೇಜಾ 26 ಎಸೆತಗಳಲ್ಲಿ 36 ರನ್ ಸಿಡಿಸಿ ಅಜೇಯರಾಗಿ ಉಳಿದರು.
ಡೇರ್‌ಡೆವಿಲ್ಸ್ ಪರ ಶಹಬಾಜ್ ನದೀಮ್ ಎರಡು ವಿಕೆಟ್ ಕಬಳಿಸಿದರೆ, ಜಹೀರ್ ಖಾನ್, ಕ್ರಿಸ್ ಮೋರಿಸ್, ಶಮಿ ಮತ್ತು ಅಮಿತ್ ಮಿಶ್ರಾ ತಲಾ ಒಂದು ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ