ಐಪಿಎಲ್ ಹರಾಜು: ವಿದೇಶಿಯರಿಗೆ ದುಬಾರಿ ಹಣ ಖರ್ಚು ಮಾಡಿದ ಫ್ರಾಂಚೈಸಿಗಳು

Webdunia
ಶುಕ್ರವಾರ, 20 ಡಿಸೆಂಬರ್ 2019 (08:47 IST)
ಕೋಲ್ಕೊತ್ತಾ: ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ವಿದೇಶೀ ಆಟಗಾರರನ್ನು ಕೊಳ್ಳಲು ಫ್ರಾಂಚೈಸಿಗಳು ಹೆಚ್ಚು ಖರ್ಚು ಮಾಡಿದ್ದು, ದೇಶೀಯ ಆಟಗಾರರನ್ನು ಕೇಳುವವರೇ ಇಲ್ಲವಾಗಿದೆ.


ಕೋಲ್ಕೊತ್ತಾ ನೈಟ್ ರೈಡರ್ಸ್ ಆಸ್ಟ್ರೇಲಿಯಾದ ಪ್ಯಾಟ್ ಕ್ಯುಮಿನ್ಸ್ ರನ್ನು 15.5 ಕೋಟಿ ರೂ. ಕೊಟ್ಟು ಖರೀದಿ ಮಾಡಿದೆ. ಇವರೇ ಈ ಆವೃತ್ತಿಯ ಶ್ರೀಮಂತ ಆಟಗಾರ. ಕಿಂಗ್ಸ್ ಇಲೆವೆನ್ ಪಂಜಾಬ್ ಗ್ಲೆನ್ ಮ್ಯಾಕ್ಸ್ ವೆಲ್ ರನ್ನು 10.75 ಕೋಟಿ ರೂ.ಗೆ ಪಡೆದುಕೊಂಡಿದೆ.

ಇನ್ನು, ವಿಂಡೀಸ್ ನ ಹೊಡೆಬಡಿಯ ಆಟಗಾರ ಶಿಮ್ರಾನ್ ಹೆಟ್ ಮ್ಯಾರ್ ನಿರೀಕ್ಷೆಯಂತೇ ದುಬಾರಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 7.75 ಕೋಟಿ ರೂ.ಗೆ ಖರೀದಿ ಮಾಡಿದೆ. ಆರ್ ಸಿಬಿ ಕ್ರಿಸ್ ಮಾರಿಸ್ ರನ್ನು 10 ಕೋಟಿ ರೂ.ಗೆ ಖರೀದಿ ಮಾಡಿದೆ.

ಮುಂಬೈ ಇಂಡಿಯನ್ಸ್ ನಥನ್ ಕೋಲ್ಟರ್ ನೀಲ್ ರನ್ನು 8 ಕೋಟಿ ರೂ.ಗೆ ಖರೀದಿಸಿದೆ. ರಾಜಸ್ಥಾನ್ ರಾಯಲ್ಸ್ ರಾಬಿನ್ ಉತ್ತಪ್ಪ, ಜೈದೇವ್‍ ಉನಾದ್ಕಟ್ ರನ್ನು ತಲಾ 3 ಕೋಟಿ ರೂ.ಗೆ ಪಡೆದುಕೊಂಡಿದೆ. ಇನ್ನು ಸಿಎಸ್ ಕೆ ಪರ ದುಬಾರಿ ಮೊತ್ತ ಪಡೆದವರು ಪಿಯೂಷ್ ಚಾವ್ಲಾ. 6.75 ಕೋಟಿ ರೂ.ಗೆ ಅವರು ಧೋನಿ ತಂಡದ ಪಾಲಾಗಿದ್ದಾರೆ. ಆದರೆ ದುಬಾರಿ ಮೊತ್ತ ಪಡೆದವರೆಲ್ಲಾ ವಿದೇಶೀ ಆಟಗಾರರೇ ಎಂಬುದು ವಿಶೇಷ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಬ್ಬಾ.. ಫಸ್ಟ್ ಟೈಂ ಅಜಿತ್ ಅಗರ್ಕರ್, ಗಂಭೀರ್ ಒಳ್ಳೆ ನಿರ್ಧಾರ ಮಾಡಿದ್ರು

ಐಸಿಸಿ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಘೋಷಣೆ: ಗಂಭೀರ್ ಮೆಚ್ಚಿನ ಆಟಗಾರನಿಗೇ ಕೊಕ್

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೀರೀಸ್ ಯಾವಾಗ ಶುರು ಇಲ್ಲಿದೆ ಡೀಟೈಲ್ಸ್

ಸಂಜು ಸ್ಯಾಮ್ಸನ್ ಬಲವಾದ ಹೊಡೆತಕ್ಕೆ ಅಂಪೈರ್‌ಗೆ ಹೀಗಾಗುವುದಾ

ತನ್ನ ಸಿಕ್ಸರ್‌ ಎಸೆತದಿಂದ ಕ್ಯಾಮಾರಮ್ಯಾನ್‌ಗೆ ನೋವು, ಕೊನೆಗೆ ಹಾರ್ದಿಕ್ ಪಾಂಡ್ಯ ಏನ್‌ ಮಾಡಿದ್ರೂ ನೋಡಿ

ಮುಂದಿನ ಸುದ್ದಿ
Show comments