Publish Date: Thu, 07 May 2026 (13:27 IST)
Updated Date: Thu, 07 May 2026 (13:29 IST)
ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಆರ್‌ಸಿಬಿ ಗೆದ್ದರೆ ಅಗ್ರಸ್ಥಾನಕ್ಕೇರಲು ಉತ್ತಮ ಅವಕಾಶವಿದೆ.
ಒಟ್ಟು 12 ಅಂಕ ಗಳಿಸಿರುವ ರಜತ್ ಪಾಟೀದಾರ್ ಬಳಗವು ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ರಿಷಭ್ ಪಂತ್ ನಾಯಕತ್ವದ ಲಖನೌ ತಂಡವು ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿದೆ. ನಾಲ್ಕು ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
ನ್‌ರೈಸರ್ಸ್ ಹೈದರಾಬಾದ್ (14) ಮತ್ತು ಪಂಜಾಬ್ ಕಿಂಗ್ಸ್ (13) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ಆರ್‌ಬಿಸಿಯೂ ಸೇರಿದಂತೆ ಒಟ್ಟು ಮೂರು ತಂಡಗಳು 12 ಅಂಕ ಗಳಿಸಿವೆ. ಅದರಿಂದಾಗಿ ಟೂರ್ನಿಯು ಈಗ ಕುತೂಹಲ ಘಟ್ಟದಲ್ಲಿದೆ. ಆರ್‌ಸಿಬಿ ಇಂದು ಗೆದ್ದರೆ 14 ಅಂಕ ಗಳಿಸುತ್ತದೆ. ತಂಡದ ನೆಟ್ ರನ್‌ರೇಟ್ ಉತ್ತಮವಾಗಿರುವುದರಿಂದ ಅಗ್ರಸ್ಥಾನಕ್ಕೇರಲಿದೆ.
ಆರ್‌ಸಿಬಿಗೆ ಇನ್ನೂ ಐದು ಪಂದ್ಯಗಳು ಬಾಕಿ ಇವೆ. ಅದರಲ್ಲಿ ಕನಿಷ್ಠ ಮೂರರಲ್ಲಿ ಗೆದ್ದರೂ ಪ್ಲೇಆಫ್ ಹಾದಿ ಸುಗಮವಾಗುತ್ತದೆ. ಅದಕ್ಕಾಗಿ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಮಾಡಿದ ಲೋಪಗಳನ್ನು ತಿದ್ದಿಕೊಂಡು ಕಣಕ್ಕಿಳಿಯುವ ಸವಾಲು ರಜತ್ ಪಡೆಗೆ ಇದೆ.