ಐಪಿಎಲ್ 2024: ಎದ್ದೇಳು ಮ್ಯಾಕ್ಸ್ ವೆಲ್, ಕೊಹ್ಲಿಗಾಗಿಯಾದ್ರೂ ಕಪ್ ಗೆಲ್ರೋ

Krishnaveni K
ಮಂಗಳವಾರ, 16 ಏಪ್ರಿಲ್ 2024 (10:40 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ನಾಲ್ಕನೇ ಸೋಲು ಕಂಡಿದೆ. ಇದಾದ ಬಳಿಕ ಆರ್ ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.

ನಿನ್ನೆಯ ಪಂದ್ಯದಲ್ಲಿ ಸೋತರೂ ಕೊಂಚ ಹೋರಾಡಿ ಸೋತಿದೆ ಎನ್ನವುದು ಸಮಾಧಾನಕಾರಿ ಅಂಶ. ಆದರೆ ಬೌಲರ್ ಗಳ ಪ್ರದರ್ಶನ ಮಾತ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ತಂಡವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಈ ಟೂರ್ನೆಮೆಂಟ್ ನಲ್ಲಿ ಗ್ಲೆನ್ ಮ್ಯಾಕ್ಸ್ ಒಂದೇ ಒಂದು ಪಂದ್ಯದಲ್ಲಿ ಆಡಿಲ್ಲ. ಈ ಹಿಂದೆ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆದಾಗ ಗ್ಲೆನ್ ಮ್ಯಾಕ್ಸ್ ವೆಲ್ ಒಂದು ಪಂದ್ಯದಲ್ಲಿ ಬಿರುಗಾಳಿಯಂತೆ ಎಗರಿ ಶತಕ ಸಿಡಿಸಿದ್ದರು. ಆ ಪಂದ್ಯದಲ್ಲಿ ಕಾಲು ನೋವಾಗಿ ನೆಲಕ್ಕುರುಳಿದ್ದರೂ ಮತ್ತೆ ಎದ್ದು ಕಾಂತಾರ ಸಿನಿಮಾದ ಶಿವನಂತೆ ಎದುರಾಳಿಗಳನ್ನು ಚಚ್ಚಿ ಹಾಕಿದ್ದರು. ಇದೀಗ ಫ್ಯಾನ್ಸ್ ಮ್ಯಾಕ್ಸ್ ವೆಲ್ ಗೆ ಮತ್ತೆ ಅಂತಹದ್ದೇ ಇನಿಂಗ್ಸ್ ಆಡಲು ಮನವಿ ಮಾಡುತ್ತಿದ್ದಾರೆ. ಮ್ಯಾಕ್ಸ್ ವೆಲ್ ಎದ್ದೇಳೋ ಎನ್ನುತ್ತಿದ್ದಾರೆ.

ಪ್ರತೀ ಪಂದ್ಯ ಸೋತಾಗಲೂ ವಿರಾಟ್ ಕೊಹ್ಲಿ ಒಂದೋ ಮೈದಾನದಲ್ಲಿ ಇಲ್ಲಾ ಡ್ರೆಸ್ಸಿಂಗ್ ರೂಂನಲ್ಲಿ ಹ್ಯಾಪ್ ಮೋರೆ ಹಾಕಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ. ಈ ಬಾರಿಯಾದರೂ ಕಪ್ ಗೆಲ್ಲಬಹುದು ಎಂದು ಅಂದುಕೊಂಡಿದ್ದ ಕೊಹ್ಲಿ ಅಭಿಮಾನಿಗಳಿಗೆ ಅವರ  ಈ ಹ್ಯಾಪ್ ಮೋರೆ ನೋಡಲಾಗುತ್ತಿಲ್ಲ. ಹೀಗಾಗಿ ಇಷ್ಟು ವರ್ಷದಿಂದ ತಂಡಕ್ಕೆ ನಿಷ್ಠರಾಗಿ ಆಡುತ್ತಿರುವ ಕೊಹ್ಲಿಗಾಗಿಯಾದರೂ ಆಡಿ ಎಂದು ಮನವಿ ಮಾಡುತ್ತಿದ್ದಾರೆ.

ಈ ಟೂರ್ನಮೆಂಟ್ ಆರಂಭಕ್ಕೆ ಮೊದಲು ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ‘ಇದು ಆರ್ ಸಿಬಿಯ ಹೊಸ ಅಧ್ಯಾಯ’ ಎಂದಿದ್ದರು. ಈ ಬಾರಿ ಆರ್ ಸಿಬಿಯ ಜೆರ್ಸಿ ವಿನ್ಯಾಸವೂ ಬದಲಾಗಿತ್ತು. ಆದರೆ ನಸೀಬು ಮಾತ್ರ ಬದಲಾಗಿಲ್ಲ. ಬದಲಾಗಿ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ ಅಭಿಮಾನಿಗಳು ಮೀಮ್ಸ್ ಗಳ ಮೂಲಕ ನಮಗೆ ಹಳೇ ಅಧ್ಯಾಯನೇ ಸಾಕು, ಮೊದಲಿನಂತಾದರೂ ಆಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಆಸ್ಟ್ರೇಲಿಯಾ ನಡುವೆ ನಾಳೆ ಕೊನೆಯ ಏಕದಿನ: ರೋಹಿತ್, ಕೊಹ್ಲಿ ಫ್ಯಾನ್ಸ್ ಗೆ ಕಾಡ್ತಿದೆ ಭಯ

ಅನುಷ್ಕಾ ಶರ್ಮಾ ಲಂಡನ್‌ ಮೋಹದಿಂದ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಹಾಳಾಯಿತಾ: ನೆಟ್ಟಿಗರ ತರಾಟೆ

ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಹುದ್ದೆ

ಟೀಂ ಇಂಡಿಯಾ ಉದ್ದಾರವಾಗಬೇಕೆಂದರೆ ಈ ಇಬ್ಬರನ್ನು ಮೊದಲು ಕಿತ್ತು ಹಾಕ್ಬೇಕು

ಎರಡು ಬಾರಿ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ ಮಾಡಿದ್ದೇನು

ಮುಂದಿನ ಸುದ್ದಿ
Show comments