Webdunia - Bharat's app for daily news and videos

Install App

ಐಪಿಎಲ್ 2024: ಹೈದರಾಬಾದ್ ನಲ್ಲಿಂದು ಸನ್ ರೈಸರ್ಸ್-ಮುಂಬೈ ಇಂಡಿಯನ್ಸ್ ನಡುವೆ ಕದನ

Krishnaveni K
ಬುಧವಾರ, 27 ಮಾರ್ಚ್ 2024 (09:34 IST)
ಹೈದರಾಬಾದ್: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡನೇ ಪಂದ್ಯವಾಡಲು ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಎರಡೂ ತಂಡಗಳೂ ಸೋಲು ಅನುಭವಿಸಿತ್ತು.

ಸನ್ ರೈಸರ್ಸ್ ಹೈದರಾಬಾದ್ ಕಳೆದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿಯೂ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಕೊನೆಯ ಹಂತದಲ್ಲಿ ಸೋತಿತ್ತು. ಆದರೆ ಈ ಪಂದ್ಯದಲ್ಲಿ ಹೈದರಾಬಾದ್ ಬೌಲಿಂಗ್ ಕೊಂಚ ಕಳೆಗುಂದಿತ್ತು. ಇದೀಗ ಐಪಿಎಲ್ ನ ದುಬಾರಿ ಆಟಗಾರ ಪ್ಯಾಟ್ ಕುಮಿನ್ಸ್ ತಮ್ಮ ಖ್ಯಾತಿಗೆ ತಕ್ಕ ಆಟವಾಡಬೇಕಿದೆ.

ಟ್ರಾವಿಸ್ ಹೆಡ್, ಮಯಾಂಕ್ ಅಗರ್ವಾಲ್, ಆಡನ್ ಮಾರ್ಕರಮ್ ಮುಂತಾದ ಪ್ರತಿಭಾವಂತರನ್ನು ಹೊಂದಿದ್ದೂ ಹೈದರಾಬಾದ್ ರನ್ ಚೇಸ್ ಮಾಡಲಾಗದೇ ಸೋತಿತ್ತು. ಆದರೆ ಈ ಪಂದ್ಯ ತವರಿನಲ್ಲಿ ನಡೆಯುತ್ತಿರುವುದರಿಂದ ತವರಿನ ಪ್ರೇಕ್ಷಕರ ಬೆಂಬಲದಿಂದ ಗೆಲ್ಲುವ ನಿರೀಕ್ಷೆಯಿದೆ.

ಇತ್ತ ಮುಂಬೈ ಇಂಡಿಯನ್ಸ್ ನದ್ದೂ ಇದೇ ಕತೆ. ಕಳೆದ ಪಂದ್ಯದಲ್ಲಿ ಗೆಲ್ಲಬೇಕಿದ್ದ ಪಂದ್ಯವನ್ನು ತನ್ನ ಕೈಯಾರೆ ಕೈ ಚೆಲ್ಲಿಕೊಂಡಿತ್ತು. ರನ್ ಚೇಸ್ ಮಾಡುವಲ್ಲಿ ಮುಂಬೈ ಎಡವಿತ್ತು. ಆದರೆ ರೋಹಿತ್ ಶರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯರಂತಹ ಘಟಾನುಘಟಿಗಳನ್ನು ಹೊಂದಿರುವ ಮುಂಬೈ ಯಾವಾಗ ಬೇಕಾದರೂ ತಿರುಗಿಬೀಳುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇಂದು  ಮೊದಲ ಗೆಲುವು ಪಡೆಯುವ ನಿರೀಕ್ಷೆಯಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ 7 ವರ್ಷದ ಹಳೆಯ ಟ್ವೀಟ್ ವೈರಲ್: ಅಂತಹದ್ದೇನಿದೆ ಅದರಲ್ಲಿ

ಏರ್ ಇಂಡಿಯಾ ವಿಮಾನ ಹತ್ತಲ್ಲ ಎಂದ ಡೇವಿಡ್ ವಾರ್ನರ್: ನಾವೂ ಹೋಗಲ್ಲ ಎಂದ ನೆಟ್ಟಿಗರು

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್: ಇತಿಹಾಸ ನಿರ್ಮಿಸಲು ಹೊರಟ ದಕ್ಷಿಣ ಆಫ್ರಿಕಾ

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

ಮುಂದಿನ ಸುದ್ದಿ
Show comments