ಐಪಿಎಲ್ 2024: ಸೋತು ಸುಣ್ಣವಾಗಿರುವ ಆರ್ ಸಿಬಿಗೆ ಇಂದು ಸನ್ ರೈಸರ್ಸ್ ಬ್ಯಾಟಿಗರಿಂದ ಅಗ್ನಿಪರೀಕ್ಷೆ

Krishnaveni K
ಗುರುವಾರ, 25 ಏಪ್ರಿಲ್ 2024 (11:48 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ಈಗಾಗಲೇ ಸೋತು ಪ್ಲೇ ಆಫ್ ನಿಂದ ಹೊರಬಿದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಔಪಚಾರಿಕ ಪಂದ್ಯವಾಡಲಿದೆ.

ಆರ್ ಸಿಬಿ ಕಳೆದ 8 ಪಂದ್ಯಗಳಿಂದ ಕೇವಲ 1 ಗೆಲುವು ಸಾಧಿಸಿದೆ. ಸತತವಾಗಿ ಸೋಲುತ್ತಲೇ ಬಂದಿರುವ ಆರ್ ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಈಗಾಗಲೇ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದೆ. ಆರ್ ಸಿಬಿಗೆ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯ.

ಈ ಟೂರ್ನಿಯುದ್ದಕ್ಕೂ ಆರ್ ಸಿಬಿಗೆ ಕಾಡಿರುವುದು ಬೌಲಿಂಗ್. ಇದುವರೆಗೆ ಬೌಲರ್ ಗಳಿಂದ ಉತ್ತಮ ಪ್ರದರ್ಶನ ಬಂದಿಲ್ಲ. ಎಲ್ಲಾ ತಂಡಗಳ ವಿರುದ್ಧವೂ ಹೊಡೆಸಿಕೊಂಡಿದ್ದೇ ಬಂತು. ಆದರೆ ಬ್ಯಾಟಿಗರು ಮಿಂಚಿದ್ದು ಇದೆ. ಅದಕ್ಕೆ ಕಳೆದ ಪಂದ್ಯದಲ್ಲಿ ದೊಡ್ಡ ಮೊತ್ತ ಬೆನ್ನತ್ತಿ ಕೇವಲ 1 ರನ್ ನಿಂದ ಸೋತಿದ್ದು ನಿದರ್ಶನ.

ಇತ್ತ ಸನ್ ರೈಸರ್ಸ್ ಹೈದರಾಬಾದ್ ಈ ಟೂರ್ನಿಯಲ್ಲಿ ದಾಖಲೆಗಳ ಮೇಲೆ ದಾಖಲೆ ಮಾಡುತ್ತಾ ರನ್ ಬೆಟ್ಟವನ್ನೇ ರಾಶಿ ಹಾಕುತ್ತಿದೆ. ಆರಂಭಿಕ ಟ್ರಾವಿಸ್ ಹೆಡ್ ಒಬ್ಬರೇ ಎದುರಾಳಿಗಳನ್ನು ಮಣ್ಣುಮುಕ್ಕಿಸಬಲ್ಲರು. ಅವರ ಜೊತೆಗೆ ಅಭಿಷೇಕ್ ಶರ್ಮ, ಹೆನ್ರಿಚ್ ಕ್ಲಾಸನ್ ಸೇರಿದಂತೆ ಹೈದರಾಬಾದ್ ಬೀಡು ಬೀಸಾದ ಬ್ಯಾಟಿಂಗ್ ಮೂಲಕ ಈ ಕೂಟದಲ್ಲಿ ಎಲ್ಲಾ ತಂಡಗಳ ಬೌಲರ್ ಗಳನ್ನೂ ಚೆಂಡಾಡಿದೆ.

ಅದರಲ್ಲೂ ಈ ಪಂದ್ಯ ನಡೆಯುತ್ತಿರುವುದು ಬೆಂಗಳೂರಿನಲ್ಲಿ. ಇಲ್ಲಿನ ಚಿಕ್ಕ ಮೈದಾನದಲ್ಲಿ ಆರ್ ಸಿಬಿಯ ಪೇಲವ ಬೌಲಿಂಗ್ ಎದುರು ಹೈದರಾಬಾದ್ ಯಾವ ಮಟ್ಟಿಗೆ ಎರಗಬಹುದು ಎಂದು ನೆನೆಸಿಕೊಂಡೇ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಮಾನ ಉಳಿಸಿಕೊಳ್ಳಲು ಆರ್ ಸಿಬಿಗೆ ಈಗ ಗೆಲುವು ಅನಿವಾರ್ಯವಾಗಿದೆ.  ಈ ಪಂದ್ಯ ಸಂಜೆ 7.30. ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

IND vs SA: ಗೌತಮ್ ಗಂಭೀರ್ ತೊಲಗಬೇಕು, ಇದು ಬಿಸಿಸಿಐಗೂ ತಲುಪಬೇಕು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಕೆಎಲ್ ರಾಹುಲ್ ಔಟಾಗಿದ್ದಕ್ಕೆ ಅನಿಲ್ ಕುಂಬ್ಳೆ ಎಷ್ಟು ಸಿಟ್ಟಾದ್ರು ರಿಯಾಕ್ಷನ್ ನೋಡಿ video

ಮುಂದಿನ ಸುದ್ದಿ
Show comments