ಪ್ಲೇ ಆಫ್ ಗೇರಿದ್ದಕ್ಕೇ ಫೈನಲ್ ಗೆದ್ದ ರೀತಿ ಸಂಭ್ರಮ ಯಾಕೋ.. ಆರ್ ಸಿಬಿ ನಡುವಳಿಕೆಯೇ ಸರಿಯಲ್ವಂತೆ

Krishnaveni K
ಸೋಮವಾರ, 20 ಮೇ 2024 (08:35 IST)
Photo Courtesy: X
ಬೆಂಗಳೂರು: ಐಪಿಎಲ್ 2024 ರಲ್ಲಿ ಪ್ಲೇ ಆಫ್ ಗೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮ ಕೆಲವರ ಹೊಟ್ಟೆ ಉರಿಸಿದೆ. ಆರ್ ಸಿಬಿ ಸಂಭ್ರಮಿಸುತ್ತಿರುವ ಪರಿಗೆ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಸೇರಿದಂತೆ ಸಿಎಸ್ ಕೆ ಅಭಿಮಾನಿಗಳು ಟಾಂಗ್ ಕೊಟ್ಟಿದ್ದಾರೆ.

ಆರ್ ಸಿಬಿ ಮೊನ್ನೆ ಸಿಎಸ್ ಕೆ ವಿರುದ್ಧ ರೋಚಕವಾಗಿ ಪಂದ್ಯ ಗೆದ್ದು ಪ್ಲೇ ಆಫ್ ಗೆ ಅರ್ಹತೆ ಪಡೆಯಿತು. ಈ ಪಂದ್ಯ ಗೆದ್ದ ಬಳಿಕ ಆರ್ ಸಿಬಿ ಆಟಗಾರರು ಮತ್ತು ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿತು. ಆದರೆ ಇದು ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ ಆಕ್ರೋಶಕ್ಕೆ ಕಾರಣವಾಗಿದೆ.

ಪಂದ್ಯ ಗೆದ್ದ ಬಳಿಕ ಆರ್ ಸಿಬಿ ಆಟಗಾರರ ನಡುವಳಿಕೆ ನೋಡಿದರೆ ಟ್ರೋಫಿಯನ್ನೇ ಗೆದ್ದರೇನೋ ಎಂಬಂತಿದೆ. ಇದನ್ನೆಲ್ಲಾ ನೋಡಲಾಗುತ್ತಿಲ್ಲ’ ಎಂದು ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಸಿಎಸ್ ಕೆ ಅಭಿಮಾನಿಗಳೂ ಆರ್ ಸಿಬಿ ತಂಡದ ಸಂಭ್ರಮವನ್ನು ಅಣಕಿಸಿದ್ದಾರೆ.

ಆರ್ ಸಿಬಿ ಆಟಗಾರರ ಆಟಿಟ್ಯೂಡ್ ನೋಡಿದರೆ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ನೆನಪಿಸುತ್ತಿದೆ.ಕಪ್ ಗೆದ್ದಿಲ್ಲ ಎಂದು ಇವರಿಗೆ ಯಾರಾದರೂ ನೆನಪು ಮಾಡಬೇಕಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ಬಾರಿ ಚಾಂಪಿಯನ್ ಆಗಿಯೂ ಆ ತಂಡದ ಆಟಗಾರರ ನಡುವಳಿಕೆ ಎಷ್ಟು ಗೌರವಯುತವಾಗಿದೆ ಗಮನಿಸಬಹುದು. ಆದರೆ ಆರ್ ಸಿಬಿ ಆಟಗಾರರು ಅತಿಯಾಗಿ ಆಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕೆಎಲ್ ರಾಹುಲ್ ಔಟಾಗಿದ್ದಕ್ಕೆ ಅನಿಲ್ ಕುಂಬ್ಳೆ ಎಷ್ಟು ಸಿಟ್ಟಾದ್ರು ರಿಯಾಕ್ಷನ್ ನೋಡಿ video

ಸ್ಮೃತಿ ಮಂಧಾನ ತಂದೆ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಲಾಶ್ ಮುಚ್ಚಲ್‌, ಕಾರಣ ಏನ್ ಗೊತ್ತಾ

IND vs SA Test: ಭಾರತದ ಗೆಲುವಿಗೆ 549 ರನ್​ಗಳ ಕಠಿಣ ಗುರಿಯೊಡ್ಡಿದ ಹರಿಣ ಪಡೆ

ಮತ್ತೊಂದು ವಿಶ್ವದಾಖಲೆಯ ಹೊಸ್ತಿಲಲ್ಲಿ ರೋಕೊ ಜೋಡಿ: ಸಚಿನ್‌–ದ್ರಾವಿಡ್‌ ದಾಖಲೆಗೆ ಕುತ್ತು

ಸ್ಮೃತಿ ಮಂಧಾನಗೆ ಚೀಟ್ ಮಾಡಿ ಬೇರೆ ಮಹಿಳೆ ಜೊತೆ ಚ್ಯಾಟ್ ಮಾಡ್ತಿದ್ರಾ ಪಾಲಾಶ್ ಮುಚ್ಚಲ್: ವೈರಲ್ ಪೋಸ್ಟ್

ಮುಂದಿನ ಸುದ್ದಿ
Show comments