Publish Date: Mon, 13 May 2024 (11:39 IST)
Updated Date: Mon, 13 May 2024 (11:41 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಸತತ ಐದು ಗೆಲುವುಗಳಿಂದ ಪ್ಲೇ ಆಫ್ ಕನಸು ಜೀವಂತವಾಗಿಟ್ಟಿರುವ ಆರ್ ಸಿಬಿಗೆ ಮುಂದಿನ ಹಾದಿ ಹೇಗೆ ಎಂಬ ಬಗ್ಗೆ ಇಲ್ಲಿದೆ ಒಂದು ವಿಶ್ಲೇಷಣೆ.
ಒಟ್ಟು 13 ಲೀಗ್ ಪಂದ್ಯಗಳನ್ನಾಡಿರುವ ಆರ್ ಸಿಬಿ 6 ಗೆಲುವು ಕಂಡಿದ್ದು 12 ಅಂಕ ಸಂಪಾದಿಸಿದೆ. ಸದ್ಯಕ್ಕೆ ಆರ್ ಸಿಬಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಆರ್ ಸಿಬಿ ಜೊತೆಗೆ 12 ಅಂಕ ಪಡೆದುಕೊಂಡ ತಂಡಗಳೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡ.
ಇವೆರಡೂ ತಂಡಗಳು ಸದ್ಯಕ್ಕೆ ಅಂಕಪಟ್ಟಿಯಲ್ಲಿ ಆರ್ ಸಿಬಿಗಿಂತ ಕೆಳಗಿನ ಸ್ಥಾನದಲ್ಲಿವೆ. ನೆಟ್ ರನ್ ರೇಟ್ ಆಧಾರದಲ್ಲಿ ಆರ್ ಸಿಬಿಯೇ ಮುಂದಿದೆ. ಆದರೆ ಆರ್ ಸಿಬಿಗಿಂತ ಮೊದಲಿರುವ ತಂಡಗಳೆಂದರೆ ಕೆಕೆಆರ್, ಎಸ್ ಆರ್ ಎರ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡ.
ಆರ್ ಸಿಬಿಗೆ ಪ್ಲೇ ಆಫ್ ಗೇರುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಇನ್ನು ಉಳಿದಿರುವುದು ಒಂದೇ ಲೀಗ್ ಪಂದ್ಯ. ಅದಕ್ಕಿಂತ ಮೊದಲು ಇಂದು ಕೆಕೆಆರ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಕೆಕೆಆರ್ ಸೋಲಬೇಕು. ಮುಂದಿನ ಪಂದ್ಯದಲ್ಲಿ ಆರ್ ಸಿಬಿ 18 ರನ್ ಗಿಂತ ಅಧಿಕ ರನ್ ಅಂತರದಲ್ಲಿ ಗೆಲ್ಲಬೇಕು. ಒಂದು ವೇಳೆ ರನ್ ಚೇಸ್ ಮಾಡುವುದಾದರೆ 11 ಬಾಲ್ ಬಾಕಿ ಇರುವಾಗಲೇ ಗೆಲ್ಲಬೆಕು. ಆಗ ಸಿಎಸ್ ಕೆಯನ್ನು ರನ್ ಸರಾಸರಿಯಲ್ಲಿ ಹಿಂದಿಕ್ಕಬಹುದು. ಹೀಗಾದಲ್ಲಿ ಮಾತ್ರ ಆರ್ ಸಿಬಿಗೆ ಪ್ಲೇ ಆಫ್ ಹಾದಿ ಸುಗಮವಾಗಲಿದೆ.