ಐಪಿಎಲ್ 2024: ಅಂಪಾಯರ್ ಚೀಟಿಂಗ್, ಮ್ಯಾಚ್ ಫಿಕ್ಸಿಂಗ್ ಎಂದ ಆರ್ ಸಿಬಿ ಫ್ಯಾನ್ಸ್

Krishnaveni K
ಸೋಮವಾರ, 22 ಏಪ್ರಿಲ್ 2024 (08:59 IST)
ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ನಿನ್ನೆಯ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಯಾಕೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅದೃಷ್ಟವೇ ಚೆನ್ನಾಗಿರಲಿಲ್ಲ. ಗೆಲ್ಲಬೇಕಿದ್ದ ಪಂದ್ಯವನ್ನು 1 ರನ್ ನಿಂದ ಸೋತು ಕೂಟದಿಂದಲೇ ನಿರ್ಗಮಿಸಬೇಕಾಯಿತು.

ಈ ಪಂದ್ಯದಲ್ಲಿ ಅಂಪಾಯರ್ ಗಳು ನೀಡಿದ ಕೆಲವೊಂದು ತಪ್ಪು ನಿರ್ಣಯಗಳು ಆರ್ ಸಿಬಿ ಫ್ಯಾನ್ಸ್ ರೊಚ್ಚಿಗೇಳುವಂತೆ ಮಾಡಿದೆ. ಆರ್ ಸಿಬಿ ಬ್ಯಾಟಿಂಗ್ ವೇಳೆ ವಿರಾಟ್ ಕೊಹ್ಲಿಗೆ ಔಟ್ ನೀಡಿದ ಬಾಲ್ ನೋ ಬಾಲ್ ಆಗಿತ್ತು ಎಂಬ ಅನುಮಾನವಿದೆ. ಈ ಬಗ್ಗೆ ಟಿವಿ ಮರುಪರಿಶೀಲನೆ ಮಾಡಿಯೂ ಕೊಹ್ಲಿ ಔಟ್ ತೀರ್ಪು ನೀಡಲಾಗಿತ್ತು. ಇದರ ಬಗ್ಗೆ ಸಿಟ್ಟಿಗೆದ್ದ ಕೊಹ್ಲಿ ಅಂಪಾಯರ್ ಗಳ ಜೊತೆ ವಾಗ್ವಾದಕ್ಕಿಳಿದರು. ಬಳಿಕ ಪೆವಿಲಿಯನ್ ಗೆ ತೆರಳುವಾಗಲೂ ತಮ್ಮ ಬ್ಯಾಟ್ ಗುದ್ದಿ ತಮ್ಮ ನಿರಾಸೆ ಪ್ರದರ್ಶಿಸಿದರು.

ಇನ್ನು, ಆರ್ ಸಿಬಿ ಅಂತಿಮ ಓವರ್ ನಲ್ಲಿ ಗೆಲ್ಲುವ ಎಲ್ಲಾ ಸಾಧ‍್ಯತೆಯಿತ್ತು. ಆದರೆ ಕರ್ಣ್ ಶರ್ಮ ಔಟಾಗಿ ಪಂದ್ಯ ತಿರುವು ಪಡೆಯಿತು. ಆದರೆ ಇದಕ್ಕೆ ಮೊದಲು ತಂಡ 182 ರನ್ ಗಳಿಸಿದ್ದಾಗ ಆರ್ ಸಿಬಿ ಬ್ಯಾಟಿಗ ಹೊಡೆದ ಬಾಲ್ ಬೌಂಡರಿ ಲೈನ್ ಟಚ್ ಆಗಿದ್ದರೂ ಅಂಪಾಯರ್ ಸಿಕ್ಸ್ ನೀಡದೇ ಬೌಂಡರಿ ನೀಡಿದರು. ಇದರ ಬಗ್ಗೆಯೂ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದು ಬಾಲ್ ನೋ ಬಾಲ್ ಆಗಿದ್ದರೂ ಅಂಪಾಯರ್ ನೋ ಬಾಲ್ ನೀಡಿಲ್ಲ. ಈ ಎಲ್ಲಾ ವಿಚಾರಗಳೂ ಆರ್ ಸಿಬಿ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ಇದು ಥರ್ಡ್ ಅಂಪಾಯರ್ ಅಲ್ಲ, ಥರ್ಡ್ ಕ್ಲಾಸ್ ಅಂಪಾಯರಿಂಗ್ ಎಂದು ಟೀಕಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

IND vs SA: ಗೌತಮ್ ಗಂಭೀರ್ ತೊಲಗಬೇಕು, ಇದು ಬಿಸಿಸಿಐಗೂ ತಲುಪಬೇಕು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಮುಂದಿನ ಸುದ್ದಿ
Show comments