ಐಪಿಎಲ್ 2024: ಕೆಕೆಆರ್ ವಿರುದ್ಧ ಇಂದು ಗುಜರಾತ್ ಗೆ ಕೊನೆಯ ಅವಕಾಶ

Krishnaveni K
ಸೋಮವಾರ, 13 ಮೇ 2024 (12:44 IST)
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಪ್ಲೇ ಆಫ್ ರೇಸ್ ನಲ್ಲಿ ಉಳಿಯಲು ಗುಜರಾತ್ ಟೈಟನ್ಸ್ ಗೆ ಇಂದು ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಕೊನೆಯ ಅವಕಾಶವಾಗಿದೆ.

ಗುಜರಾತ್ ಟೈಟನ್ಸ್ ಆರಂಭ ಉತ್ತಮವಾಗಿದ್ದರೂ ನಡುವೆ ಸತತವಾಗಿ ಪಂದ್ಯಗಳನ್ನು ಸೋತು ಬೇಗನೇ ಈ ಐಪಿಎಲ್ ನಿಂದ ಹೊರಬೀಳುವ ಅಪಾಯದಲ್ಲಿತ್ತು. ಆದರೆ ಕಳೆದ ಪಂದ್ಯದಲ್ಲಿ ಸೂಕ್ತ ಸಮಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ನ್ನು ಮಣಿಸಿದ ಗುಜರಾತ್ ಪ್ಲೇ ಆಫ್ ಕನಸು ಜೀವಂತವಾಗಿಟ್ಟಿದೆ.

ಕಳೆದ ಪಂದ್ಯದಲ್ಲಿ ಗುಜರಾತ್ ಬ್ಯಾಟಿಗರು ಆಡಿದ ಪರಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿರುತ್ತದೆ. ಒಟ್ಟು 12 ಪಂದ್ಯಗಳನ್ನಾಡಿರುವ ಗುಜರಾತ್ ಈಗ 5 ಗೆಲುವುಗಳೊಂದಿಗೆ 10 ಅಂಕ ಸಂಪಾದಿಸಿದೆ. ಪ್ಲೇ ಆಫ್ ಗೇರುವ ಹಾದಿ ಕಷ್ಟವೇ ಆಗಿದ್ದರೂ ಬೇಗನೇ ಸೋಲಲ್ಲ ಎಂದು ಈಗಾಗಲೇ ತಂಡ ತೋರಿಸಿಕೊಟ್ಟಿದೆ.

ಇತ್ತ ಕೆಕೆಆರ್ ಗೆ ಈ ಪಂದ್ಯ ಔಪಚಾರಿಕವಾಗಿದೆ. ಈಗಾಗಲೇ ಪ್ಲೇ ಆಫ್ ಗೆ ಒಂದು ಕಾಲಿಟ್ಟಿರುವ ಕೋಲ್ಕೊತ್ತಾ ತಂಡಕ್ಕೆ ಉಳಿದ ಎಲ್ಲಾ ಲೀಗ್ ಪಂದ್ಯಗಳನ್ನು ಸೋತರೂ ಚಿಂತೆಯಿಲ್ಲ. ಸದ್ಯಕ್ಕೆ ಕೆಕೆಆರ್ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಈ ಬಾರಿ ಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಬೆಸ್ಟ್ ಟೀಂ ಕಣಕ್ಕಿಳಿಸಿದ ಟೀಂ ಇಂಡಿಯಾ

ಮೊಹಮ್ಮದ್ ಶಮಿ ಯಾಕೆ ಆಯ್ಕೆ ಮಾಡಿಲ್ಲ ಎಂದು ಕೇಳಿದ್ದಕ್ಕೆ ಶುಭಮನ್ ಗಿಲ್ ಉತ್ತರ ಹೀಗಿತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಜೀವ ಭಯಕ್ಕೆ ಪಾಕಿಸ್ತಾನದಿಂದ ವಾಪಸ್ ಆಗ್ತೀವಿ ಎಂದ ಶ್ರೀಲಂಕಾ ಕ್ರಿಕೆಟಿಗರು: ಬರಬೇಡಿ ಅಂತಿದೆ ಕ್ರಿಕೆಟ್ ಬೋರ್ಡ್

ಮುಂದಿನ ಸುದ್ದಿ
Show comments