ಐಪಿಎಲ್ 2024: ಗುಜರಾತ್ ವಿರುದ್ಧವೂ ರನ್ ಹೊಳೆ ಹರಿಸುತ್ತಾ ಸನ್ ರೈಸರ್ಸ್ ಹೈದರಾಬಾದ್

Krishnaveni K
ಭಾನುವಾರ, 31 ಮಾರ್ಚ್ 2024 (09:43 IST)
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಇಂದು ಎರಡು ಪಂದ್ಯ ನಡೆಯಲಿದ್ದು, ಮೊದಲನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದೆ.

ಹೈದರಾಬಾದ್ ತಂಡ ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದನ್ನು ಐಪಿಎಲ್ ಪ್ರೇಮಿಗಳು ಮರೆಯಲಾರರು. ಕಳೆದ ಪಂದ್ಯದಲ್ಲಿ ಹೈದರಾಬಾದ್ ದಾಂಡಿಗರು ಮೈಮೇಲೆ ಆವೇಶ ಬಂದವರಂತೆ ಅಬ್ಬರಿಸಿ ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತ ಸಿಡಿಸಿದ್ದರು.

ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸನ್, ಅಭಿಷೇಕ್ ಶರ್ಮ, ಆಡನ್ ಮಾರ್ಕರಮ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಈ ಬ್ಯಾಟಿಗರು ಇದುವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಬ್ಯಾಟಿಂಗ್ ನಲ್ಲಿ ಮಿಂಚಿದ್ದಾರೆ. ಹೈದರಾಬಾದ್ ಇದುವರೆಗೆ ಎರಡು ಪಂದ್ಯವಾಡಿದ್ದು ಈ ಎರಡೂ ಪಂದ್ಯಗಳಲ್ಲಿ ಬ್ಯಾಟಿಗರು ಸಿಡಿದಿದ್ದಾರೆ.

ಹೀಗಾಗಿ ಗುಜರಾತ್ ತಂಡಕ್ಕೆ ಎದುರಾಳಿ ಬ್ಯಾಟಿಗರನ್ನು ಕಟ್ಟಿಹಾಕುವುದೇ ಸವಾಲಾಗಲಿದೆ. ಆಶಿಷ್ ನೆಹ್ರಾ ಅದ್ಭುತ ಕೋಚಿಂಗ್ ನಲ್ಲಿ ಶುಬ್ಮನ್ ಗಿಲ್ ನೇತೃತ್ವದ ಯುವ ತಂಡ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಇದುವರೆಗೆ ನಡೆದ 2 ಪಂದ್ಯಗಳಲ್ಲಿ ಒಂದು ಸೋಲು, ಒಂದು ಗೆಲುವು ಕಂಡಿದೆ. ಕಳೆದ ಪಂದ್ಯದಲ್ಲಿ ಸೋತಿದ್ದ ಗುಜರಾತ್ ಈಗ ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ವಿರಾಟ್ ಕೊಹ್ಲಿ ಅಟೋಗ್ರಾಫ್ ಕೊಟ್ಟಿದ್ದಕ್ಕೆ ಈ ಹುಡುಗ ಹಿಂಗೆಲ್ಲಾ ಮಾಡೋದಾ

ವಿರಾಟ್ ಕೊಹ್ಲಿ ಆರ್ ಸಿಬಿಗೆ ಗುಡ್ ಬೈ ಹೇಳಲ್ಲ: ಮೊಹಮ್ಮದ್ ಕೈಫ್ ನೀಡಿದ ಕಾರಣ ನೋಡಿ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಒಬ್ಬರನ್ನೊಬ್ಬರು ನೋಡಿ ಎಂಥಾ ಖುಷಿ ವಿಡಿಯೋ ನೋಡಿ

ಕೊಹ್ಲಿ, ರೋಹಿತ್ ಆಡುವ ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ ಲೈವ್ ಎಲ್ಲಿ ನೋಡಬೇಕು

ಫಿಟ್ ಆಗಿದ್ರೂ ನನ್ನ ಯಾಕೆ ಕಡೆಗಣಿಸ್ತಿದ್ದೀರಿ: ಆಯ್ಕೆ ಸಮಿತಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮೊಹಮ್ಮದ್ ಶಮಿ

ಮುಂದಿನ ಸುದ್ದಿ
Show comments