Webdunia - Bharat's app for daily news and videos

Install App

ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್ ಒತ್ತಡಕ್ಕೆ ಮಣಿದು ಸೋತ ರಾಜಸ್ಥಾನ್ ರಾಯಲ್ಸ್

Krishnaveni K
ಬುಧವಾರ, 8 ಮೇ 2024 (08:37 IST)
ದೆಹಲಿ: ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಓವರ್ ಗಳಲ್ಲಿ ಒತ್ತಡ ನಿಭಾಯಿಸಲು ವಿಫಲವಾದ ರಾಜಸ್ಥಾನ್ ರಾಯಲ್ಸ್ ತಂಡ 20 ರನ್ ಗಳಿಂದ ಸೋಲು ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್‍ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ಡೆಲ್ಲಿಗೆ ಜ್ಯಾಕ್ ಫ್ರೇಝರ್- ಅಭಿಷೇಕ್ ಪೊರೆಲ್ ಜೋಡಿ ಉತ್ತಮ ಆರಂಭ ನೀಡಿತು. ಜ್ಯಾಕ್ 50 ಮತ್ತು ಅಭಿಷೇಕ್ 65 ರನ್ ಗಳಿಸಿ ಔಟಾದರು. ಕೆಳ ಕ್ರಮಾಂಕದಲ್ಲಿ ತ್ರಿಸ್ಟಾನ್ ಸ್ಟಬ್ಸ್ 20 ಎಸೆತಗಳಿಂದ 41 ರನ್ ಗಳಿಸಿ ತಂಡದ ಮೊತ್ತ 200 ರ ಗಡಿ ದಾಟಲು ನೆರವಾದರು. ರಾಜಸ್ಥಾನ್ ಪರ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ರಾಜಸ್ಥಾನ್ ಗೆ ನಾಯಕ ಸಂಜು ಸ್ಯಾಮ್ಸನ್ ಆಸೆರೆಯಾದರು. ಒಟ್ಟು 46 ಎಸೆತ ಎದುರಿಸಿದ ಅವರು 86 ರನ್ ಸಿಡಿಸಿ ಆರ್ ಆರ್ ತಂಡದ ಗೆಲುವಿನ ಕನಸು ಚಿಗುರಿಸಿದರು. ಆದರೆ ದುರದೃಷ್ಟವಶಾತ್ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಕೊನೆಯ 3 ಓವರ್ ಗಳಲ್ಲಿ ರಾಜಸ್ಥಾನ್ ನಿರೀಕ್ಷಿತ ರೀತಿಯಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಕುಲದೀಪ್ ಯಾದವ್ ಬಿಗುವಿನ ದಾಳಿ ಸಂಘಟಿಸಿ 2 ವಿಕೆಟ್ ಕಬಳಿಸಿದರು. ಇದರಿಂದಾಗಿ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಲಷ್ಟೇ ಶಕ್ತವಾಯಿತು.

ರಾಜಸ್ಥಾನ್ ಕಳೆದ ಎರಡೂ ಪಂದ್ಯಗಳಲ್ಲಿ ಡೆತ್ ಓವರ್ ಗಳಲ್ಲಿ ಟಾರ್ಗೆಟ್ ಚೇಸ್ ಮಾಡಲು ವಿಫಲವಾಗಿದೆ. ಇದು ಸಂಜು ಪಡೆಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಈ ಸೋಲಿನೊಂದಿಗೆ ರಾಜಸ್ಥಾನ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿದುಕೊಂಡರೆ ಡೆಲ್ಲಿ ಐದನೇ ಸ್ಥಾನಕ್ಕೇರಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

World Badminton: ಮೋಡಿ ಮಾಡಿದ ಸಾತ್ವಿಕ್‌–ಚಿರಾಗ್‌ ಜೋಡಿ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾರಿತ್ರಿಕ ಸಾಧನೆ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ತಡವಾಗಿ ಆರಂಭವಾಗಲಿದೆ, ಕಾರಣ ಇಲ್ಲಿದೆ

ರಾಜಸ್ಥಾನ್ ರಾಯಲ್ಸ್ ತೊರೆದ ರಾಹುಲ್ ದ್ರಾವಿಡ್: ಈ ತಂಡಕ್ಕೆ ಕೋಚ್ ಆಗಲಿ ಅಂತಿದ್ದಾರೆ ಫ್ಯಾನ್ಸ್

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮಡಿದವರ ಕುಟುಂಬಕ್ಕೆ 25 ಲಕ್ಷ ರೂ ನೀಡಿದ ಆರ್ ಸಿಬಿ

ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಟೆಸ್ಟ್ ಪರೀಕ್ಷೆ

ಮುಂದಿನ ಸುದ್ದಿ
Show comments