Daily Horoscope
✕

ಐಪಿಎಲ್ 2024: ಸಿಎಸ್ ಕೆ ಜೊತೆ ಸೆಣಸಾಡಲಿರುವ ಲಕ್ನೋ ಸೂಪರ್ ಜೈಂಟ್ಸ್

Krishnaveni K
ಶುಕ್ರವಾರ, 19 ಏಪ್ರಿಲ್ 2024 (08:45 IST)
ಲಕ್ನೋ: ಐಪಿಎಲ್ 2024 ರ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಖಾಮುಖಿಯಾಗಲಿದೆ. ಇಂದಿನ ಪಂದ್ಯ ಲಕ್ನೋ ಮೈದಾನದಲ್ಲಿ ನಡೆಯಲಿದೆ.

ಇದು ಸತತ ಎರಡು ಸೋಲು ಮತ್ತು ಸತತ ಎರಡು ಗೆಲುವು ಕಂಡ ತಂಡಗಳ ನಡುವಿನ ಪಂದ್ಯ. ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಸೋತಿತ್ತು. ಹೀಗಾಗಿ ಇಂದು ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳಲು ಸಿಎಸ್ ಕೆಯನ್ನು ಮಣಿಸಲೇಬೇಕಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭಿಕ ಪಂದ್ಯದಲ್ಲಿ ಉತ್ತಮವಾಗಿಯೇ ಆಡಿತ್ತು. ಸತತ ಗೆಲುವುಗಳೊಂದಿಗೆ ಕೆಎಲ್ ರಾಹುಲ್ ಪಡೆ ಅಂಕಪಟ್ಟಿಯಲ್ಲಿ ಅಗ್ರ ಮೂರರೊಳಗೆ ಇತ್ತು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಲಕ್ನೋ ಈಗ ಅಂಕಪಟ್ಟಿಯಲ್ಲಿ 5 ನೇ ಸ್ಥಾನಕ್ಕೆ ಜಾರಿದೆ. ಇತ್ತ ಡೆಲ್ಲಿ ಕೂಡಾ ನೆಟ್ ರನ್ ರೇಟ್ ನಲ್ಲಿ ಪೈಪೋಟಿ ನೀಡುತ್ತಿರುವುದರಿಂದ ಲಕ್ನೋಗೆ ಈಗ ಗೆಲುವು ಅನಿವಾರ್ಯವಾಗಿದೆ. ಸದ್ಯಕ್ಕೆ ಲಕ್ನೋ 6 ಪಂದ್ಯಗಳಿಂದ 3 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ.

ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಟೂರ್ನಿಯಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಸೋತಿದೆ. ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಕಂಡಿದೆ. ಅದರಲ್ಲೂ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಎರಡು ಗೆಲುವು ಕಂಡಿದೆ. ತಂಡದ ಬ್ಯಾಟಿಂಗ್ ನಲ್ಲಿ ನಾಯಕ ಋತುರಾಜ್ ಗಾಯಕ್ ವಾಡ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಕೊನೆಯಲ್ಲಿ ಬಂದು ಧೋನಿ ಉತ್ತಮ ಫಿನಿಶ್ ನೀಡುತ್ತಿದ್ದಾರೆ. ಬೌಲಿಂಗ್ ನಲ್ಲೂ ಪತಿರಾಣ ಫಾರ್ಮ್‍ ತಂಡಕ್ಕೆ ಪ್ಲಸ್ ಪಾಯಿಂಟ್. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬೌಲರ್‌ಗಳ ವೃತ್ತಿಜೀವನ ಅಪಾಯದಲ್ಲಿದೆ: ಸೀಮಿತ ಓವರ್‌ಗಳ ಪಿಚ್‌ಗಳ ವಿರುದ್ಧ ಗೌತಮ್ ಗಂಭೀರ್ ಆಕ್ರೋಶ

ಮನೆಯಲ್ಲಿ ಟಿವಿ ನೋಡುತ್ತಲೇ ಲಾಸ್ಟ್ ಐದು ಓವರ್ ಬೌಲಿಂಗ್ ಪ್ಲ್ಯಾನ್ ಮಾಡಿದ ಸೂರ್ಯಕುಮಾರ್ ಯಾದವ್ Video

IND vs WI: ಅಯ್ಯೋ ಚೇಟಾ ಸೆಂಚುರಿ ಮಿಸ್ ಆಯ್ತಲ್ಲಾ.. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್

IND vs WI 2nd T20I: ರಾಂಚಿಯಲ್ಲಿ ರೋಚಕ ಸಮರ, ಪಂದ್ಯದ ಸಮಯ, ಟಿವಿ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೌರ್ ನಡುವೆ ಹೀಗೆಲ್ಲಾ ನಡೆಯುತ್ತಿತ್ತಾ.. ಹರಿದಾಡುತ್ತಿದೆ ಹೀಗೊಂದು ಸುದ್ದಿ

ಮುಂದಿನ ಸುದ್ದಿ
Show comments