ಐಪಿಎಲ್ 2024: ಬಾಲ್ ಬಾಯ್ ಕ್ಯಾಚ್ ಗೆ ಇಂಪ್ರೆಸ್ ಆದ ಜಾಂಟಿ ರೋಡ್ಸ್

Krishnaveni K
ಸೋಮವಾರ, 6 ಮೇ 2024 (10:30 IST)
Photo Courtesy: Twitter
ಲಕ್ನೋ: ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ಬಾಲ್ ಬಾಯ್ ಒಬ್ಬರು ಹಿಡಿದ ಅದ್ಭುತ ಕ್ಯಾಚ್ ಲಕ್ನೋ ಫೀಲ್ಡಿಂಗ್ ಕೋಚ್ ಜಾಂಟಿ ರಾಡ್ಸ್ ಮೆಚ್ಚುಗೆಗೆ ಪಾತ್ರವಾಗಿದೆ.

ಕೆಕೆಆರ್ ನೀಡಿದ 236 ರನ್ ಗಳ ಬೃಹತ್ ಮೊತ್ತ ಬೆನ್ನತ್ತುವಾಗ ಲಕ್ನೋ ಬ್ಯಾಟಿಗ ಮಾರ್ಕಸ್‍ ಸ್ಟಾಯ್ನಿಸ್ ಥರ್ಡ್ ಮ್ಯಾನ್ ಕಡೆಗೆ ಅಪ್ಪರ್ ಕಟ್ ಶಾಟ್ ಹೊಡೆದರು. ಈ ಬಾಲ್ ನ್ನು ಅಲ್ಲಿಯೇ ಇದ್ದ ಬಾಲ್ ಬಾಯ್ ಅದ್ಭುತವಾಗಿ ಕ್ಯಾಚ್ ಪಡೆದರು. ಅವರ ಕ್ಯಾಚ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಡಗೌಟ್ ನಲ್ಲಿ ಕುಳಿತಿದ್ದ ಲಕ್ನೋ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಚಪ್ಪಾಳೆ ತಟ್ಟಿ ಬಾಲ್ ಬಾಯ್ ಗೆ ಚಿಯರ್ ಅಪ್ ಮಾಡಿದರು. ಪಕ್ಕಾ ನುರಿತ ಫೀಲ್ಡರ್ ನಂತೇ ಓಡುತ್ತಾ ಬಂದ ಬಾಲ್ ಬಾಯ್ ಅದ್ಭುತ ಕ್ಯಾಚ್ ಹಿಡಿದರು. ಈ ವೇಳೆ ಪ್ರೇಕ್ಷಕರೂ ಜೋರಾಗಿ ಹರ್ಷೋದ್ಗಾರ ಮಾಡಿದರು.

ಈ ಪಂದ್ಯದಲ್ಲಿ ಲಕ್ನೋ 98 ರನ್ ಗಳಿಂದ ಸೋತಿತು. ಕೆಕೆಆರ್ ನೀಡಿದ 236 ರನ್ ಗಳನ್ನು ಬೆನ್ನತ್ತಿದ ಲಕ್ನೋ ಕೇವಲ 137 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಲಕ್ನೋ ಐದನೇ ಸ್ಥಾನಕ್ಕೆ ಜಾರಿದರೆ, ಕೆಕೆಆರ್ ನಂ.1 ಸ್ಥಾನಕ್ಕೇರಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ವಿಶ್ವಕಪ್‌ ಕ್ರಿಕೆಟ್‌: ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ಪಾಕ್‌ ಆಟಗಾರ್ತಿಗೆ ಮತ್ತೊಂದು ಶಾಕ್‌

Video: ಪುರುಷರ ತಂಡದಂತೇ ಮಹಿಳಾ ಕ್ರಿಕೆಟಿಗರೂ ಪಾಕಿಸ್ತಾನವನ್ನು ಸೋಲಿಸಿದ್ರು ಮೂತಿಯೂ ನೋಡದೇ ಬಂದ್ರು

Video: ಮೈದಾನದಲ್ಲಿ ಸ್ಪ್ರೇ ಮಾಡಿದ ಪಾಕಿಸ್ತಾನ ಆಟಗಾರ್ತಿಯರು, ಪಂದ್ಯ ಸ್ಥಗಿತವಾಗಿದ್ದೇಕೆ ಗೊತ್ತಾ

INDW vs PAKW: ಟಾಸ್ ವೇಳೆ ಭಾರತಕ್ಕೆ ಮೋಸ ಮಾಡಿದ ಪಾಕಿಸ್ತಾನ ನಾಯಕಿ: ವಿಡಿಯೋ ವೈರಲ್

INDWvsPAKW: ಕೈ ಕುಲುಕುವುದು ಬಿಡಿ, ಮುಖವೂ ನೋಡದ ಹರ್ಮನ್ ಪ್ರೀತ್ ಕೌರ್

ಮುಂದಿನ ಸುದ್ದಿ
Show comments