Select Your Language

Notifications

webdunia
webdunia
webdunia
webdunia

ಐಪಿಎಲ್ ನಿಂದ ಮಿಸ್ ಆಗಲಿದ್ದಾರೆ ಈ ಸ್ಟಾರ್ ಪ್ಲೇಯರ್ಸ್

ಐಪಿಎಲ್ ನಿಂದ ಮಿಸ್ ಆಗಲಿದ್ದಾರೆ ಈ ಸ್ಟಾರ್ ಪ್ಲೇಯರ್ಸ್
ಮುಂಬೈ , ಗುರುವಾರ, 17 ನವೆಂಬರ್ 2022 (09:00 IST)
ಮುಂಬೈ: ಐಪಿಎಲ್ 2023 ರಲ್ಲಿ ಅಭಿಮಾನಿಗಳು ಈ ಬಾರಿ ಕೆಲವು ಐಪಿಎಲ್ ಸ್ಪೆಷಲಿಸ್ಟ್ ಸ್ಟಾರ್ ಆಟಗಾರರನ್ನು ಮಿಸ್ ಮಾಡಿಕೊಳ್ಳುವುದು ಖಂಡಿತಾ. ಅವರು ಯಾರೆಂದು ನೋಡೋಣ.

ಸುರೇಶ್ ರೈನಾ: ಕಳೆದ ಎರಡು ಆವೃತ್ತಿಗಳಿಂದ ಸುರೇಶ್ ರೈನಾ ಮಿಸ್ ಆಗಿದ್ದಾರೆ. ಆದರೂ ಅವರು ಕಮ್ ಬ್ಯಾಕ್ ಮಾಡಬಹುದೆಂಬ ವಿಶ್ವಾಸವಿತ್ತು. ಆದರೆ ಕಳೆದ ಬಾರಿ ಹರಾಜಿನಲ್ಲಿ ಬಾಕಿ ಉಳಿದಿದ್ದ ರೈನಾ ಈಗ ಐಪಿಎಲ್ ನಿಂದಲೇ ನಿವೃತ್ತರಾಗಿದ್ದಾರೆ.

ಕ್ರಿಸ್ ಗೇಲ್: ಆರ್ ಸಿಬಿ, ಕಿಂಗ್ಸ್ ಪಂಜಾಬ್ ಪರ ಐಪಿಎಲ್ ಆಡಿದ್ದ ಕ್ರಿಸ್ ಗೇಲ್ ಗೆ ಭಾರತದಲ್ಲೇ ತಮ್ಮದೇ ಅಭಿಮಾನಿ ವರ್ಗವಿದೆ. ಆದರೆ ಇದೀಗ ಅವರು ಐಪಿಎಲ್ ನಲ್ಲಿ ಆಡದೇ ಇರುವುದು ಅಭಿಮಾನಿಗಳಿಗೆ ನಿರಾಶೆಯಾಗಿದೆ.

ಕಿರನ್ ಪೊಲ್ಲಾರ್ಡ್: ಮುಂಬೈ ಇಂಡಿಯನ್ಸ್ ತಂಡದ ನಿಷ್ಠಾವಂತ ದಾಂಡಿಗ ವೆಸ್ಟ್ ಇಂಡೀಸ್ ನ ಕಿರನ್ ಪೊಲ್ಲಾರ್ಡ್ ರನ್ನು  ಈಬಾರಿ ಮುಂಬೈ ತಂಡ ಕೈ ಬಿಟ್ಟ ಬೆನ್ನಲ್ಲೇ ಅವರು ಐಪಿಎಲ್ ಗೇ ವಿದಾಯ ಘೋಷಿಸಿದ್ದಾರೆ. ಇದು ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ.

ಎಬಿಡಿ ವಿಲಿಯರ್ಸ್: ಆರ್ ಸಿಬಿ ತಂಡದ ಮಾನಸಪುತ್ರ ಎಬಿಡಿ ವಿಲಿಯರ್ಸ್ ರನ್ನು ಬೆಂಗಳೂರಿಗರು ತಮ್ಮ ಮನೆಮಗನಂತೇ ಕಾಣುತ್ತಾರೆ. ಕೊಹ್ಲಿಯಷ್ಟೇ ಎಇಬಿಡಿಗೂ ಗೌರವ ಸಲ್ಲಿಸುತ್ತಾರೆ. ಕಳೆದ ಎರಡು ಆವೃತ್ತಿಗಳಿಂದ ಅವರು ಆಡುತ್ತಿಲ್ಲ. ಅವರನ್ನು ಈಗಲೂ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಟಿ20 ತಂಡಕ್ಕೆ ಧೋನಿ ಕಮ್ ಬ್ಯಾಕ್?!