ಐಪಿಎಲ್ 2023: ರಿಂಕು ಸಿಕ್ಸರ್ ಗೆ ದಂಗುಬಡಿದ ಕ್ರಿಕೆಟ್ ಲೋಕ

Webdunia
ಸೋಮವಾರ, 10 ಏಪ್ರಿಲ್ 2023 (07:20 IST)
ಅಹಮ್ಮದಾಬಾದ್: ಐಪಿಎಲ್ ಎಂದರೆ ಸಿಕ್ಸರ್, ಬೌಂಡರಿಗಳ ಸುರಿಮಳೆ ಗ್ಯಾರಂಟಿ ಎನ್ನುವುದು ಕ್ರಿಕೆಟ್ ಪ್ರಿಯರಿಗೆ ಗೊತ್ತು. ಆದರೆ ನಿನ್ನೆ ಗುಜರಾತ್ ಟೈಟನ್ಸ್ ವಿರುದ್ಧ ಕೆಕೆಆರ್ ಆಟಗಾರ ರಿಂಕು ಸಿಂಗ್ ಸಿಡಿಸಿದ ಸಿಕ್ಸರ್ ಗಳ ಸರಮಾಲೆಗೆ ಇಡೀ ಕ್ರಿಕೆಟ್ ಲೋಕವೇ ಕ್ಲೀನ್ ಬೌಲ್ಡ್ ಆಗಿದೆ.

ಗುಜರಾತ್ ನೀಡಿದ್ದ 205 ರನ್ ಗಳ ಗುರಿ ಬೆನ್ನತ್ತಿದ್ದ ಕೆಕೆಆರ್ ಸೋಲಿನಂಚಿನಲ್ಲಿತ್ತು. 19 ಓವರ್ ಆದಾಗ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತಷ್ಟೇ. ಹೀಗಾಗಿ ಸೋಲು ಗ್ಯಾರಂಟಿ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ 16 ಎಸೆತಗಳಿಂದ 18 ರನ್ ಗಳಿಸಿ ಕ್ರೀಸ್ ನಲ್ಲಿದ್ದ ರಿಂಕು ಸಿಂಗ್ ಪಂದ್ಯದ ಗತಿಯನ್ನೇ ಬದಲಾಯಿಸಿದರು.

ಅಂತಿಮ ಓವರ್ ನಲ್ಲಿ 29 ರನ್ ಬೇಕಾಗಿದ್ದಾಗ ಕೊನೆಯ ಐದು ಎಸೆತಗಳನ್ನು ಸತತವಾಗಿ ಸಿಕ್ಸರ್ ಗಟ್ಟುವ ಮೂಲಕ ಕೆಕೆಆರ್ ಗೆ ಅಸಾಧ‍್ಯವಾಗಿದ್ದ ಗೆಲುವು ಕೊಡಿಸಿದರು. ಕೊನೆಗೆ ರಿಂಕು 21 ಎಸೆತಗಳಿಂದ 48 ರನ್ ಗಳಿಸಿದ್ದರು! ರಿಂಕು ಸಿಂಗ್ ಸಿಕ್ಸರ್ ಕಮಾಲ್ ಗೆ ಇಡೀ ಕ್ರಿಕೆಟ್ ಲೋಕವೇ ಶಹಬ್ಬಾಶ್ ನೀಡಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

ಮೊಹಮ್ಮದ್ ಶಮಿ ಎಲ್ಲಿ; ಅಜಿತ್ ಅಗರ್ಕರ್ ವಿರುದ್ಧ ಮುಗಿಬಿದ್ದ ಮಾಜಿ ಆಟಗಾರರು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ: ರೋಹಿತ್ ಶರ್ಮಾಗೆ ನಗುವೋ ನಗು video

ಮುಂದಿನ ಸುದ್ದಿ
Show comments