2016 ಐಪಿಎಲ್ ಪಂದ್ಯಾವಳಿ ಅತ್ಯಂತ ಅನಿಶ್ಚಿತ ಆವೃತ್ತಿಗಳಲ್ಲಿ ಒಂದಾಗಿದೆ. 52 ಪಂದ್ಯಗಳು ಮುಗಿದಿದ್ದರೂ ಯಾವ ತಂಡವೂ ಇನ್ನೂ ಪ್ಲೇ ಆಫ್ ಪ್ರವೇಶಿಸಿಲ್ಲ. 6 ತಂಡಗಳು ಪ್ಲೇ ಆಫ್‌ನ ನಾಲ್ಕು ಸ್ಥಾನಗಳಿಗಾಗಿ ಇನ್ನೂ ಪೈಪೋಟಿಯಲ್ಲಿವೆ. 5 ತಂಡಗಳು 16 ಪಾಯಿಂಟ್‌ಗಳಿಂದ ಸಮಸಮವಾಗುವ ಸನ್ನಿವೇಶ ಒದಗಿಬಂದು, ನೆಟ್ ರನ್ ರೇಟ್ ಮುಖ್ಯ ಅಂಶವಾಗಿ ಪರಿಗಣಿಸಲಾಗುವ ಸಾಧ್ಯತೆಯೂ ಬರಬಹುದು. ಡೇರ್ ಡೆವಿಲ್ಸ್ ರೋಮಾಂಚಕ ಕೊನೆಯ ಎಸೆತದ ವಿಜಯದಿಂದ ಪ್ಲೇಆಫ್ ರೇಸ್ ಬಿರುಸನ್ನು ಪಡೆದುಕೊಂಡಿದೆ.
ಸನ್‌ರೈಸರ್ಸ್ ಹೈದರಾಬಾದ್
ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ
ಆಡಿದ ಪಂದ್ಯ 13, ಪಾಯಿಂಟ್‌ಗಳು 16
ಮುಂದಿನ ಪಂದ್ಯಗಳು: ಕೋಲ್ಕತಾ ನೈಟ್ ರೈಡರ್ಸ್ (ಮೇ 22, ಎಡೆನ್ ಗಾರ್ಡನ್ಸ್ )
ಡೇರ್ ಡೆವಿಲ್ಸ್ ವಿರುದ್ಧ ರೋಚಕ ಪಂದ್ಯದಲ್ಲಿ ಸೋತ ಸನ್ ರೈಸರ್ಸ್ ತಾನೇ ತಾನಾಗಿ ಪ್ಲೇ ಆಫ್ ಅರ್ಹತೆ ಪಡೆಯಲು ನೈಟ್ ರೈಡರ್ಸ್ ವಿರುದ್ಧ ಗೆಲ್ಲಲೇಬೇಕಾಗಿದೆ. ಕೆಕೆಆರ್ ವಿರುದ್ಧ ಸೋತ ಪಕ್ಷದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಲಯನ್ಸ್ ಗೆಲ್ಲಬೇಕೆಂದು ಅದು ಬಯಸಿದೆ. ಡೆಲ್ಲಿ ಡೇರ್ ಡೇವಿಲ್ಸ್ ಆರ್‌ಸಿಬಿ ವಿರುದ್ಧ ಗೆಲ್ಲಬೇಕೆಂದು ಕೂಡ ಅದು ಆಶಿಸಿದೆ. ಏಕೆಂದರೆ ಡಿಡಿ ನೆಟ್ ರನ್ ರೇಟ್ ಅಷ್ಟೊಂದು ಹೆಚ್ಚಾಗಿಲ್ಲ. ಸನ್ ರೈಸರ್ಸ್ ಪರ ಆಶಿಶ್ ನೆಹ್ರಾ ಮಂಡಿ ರಜ್ಜು ಗಾಯದಿಂದ ಆಡದೇ ಇರುವುದು ತಂಡಕ್ಕೆ ಪೆಟ್ಟು ಬಿದ್ದಿದೆ. ಆಶಿಶ್ ನೆಹ್ರಾ ಟೀಂ ಇಂಡಿಯಾದ ಪರ ಟಿ 20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಸನ್‌ರೈಸರ್ಸ್ ಪರ ಯುವರಾಜ್ ಸಿಂಗ್, ಶಿಖರ್ ಧವನ್ ಮತ್ತು ನಾಯಕ ಡೇವಿಡ್ ವಾರ್ನರ್ ಬ್ಯಾಟ್ಸ್‌ಮನ್‌ಗಳಾಗಿದ್ದು, ಮುಸ್ತಫಿಜುರ್ ರೆಹ್ಮಾನ್ ಮತ್ತು ಭುವನೇಶ್ವರ್ ಕುಮಾರ್ , ಮಾರ್ಗನ್ ವೇಗದ ಬೌಲರುಗಳು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.