ಮಹಾಶಿವರಾತ್ರಿ ದಿನ ಟೀಮ್ ಇಂಡಿಯಾದ ಹಣೆಬರಹ ಸರಿ ಇರಲಿಲ್ಲ. ಟರ್ನಿಂಗ್ ಪಿಚ್`ನಲ್ಲಿ ವಿದೇಶಿ ಬ್ಯಾಟ್ಸ್`ಮನ್`ಗಳನ್ನ ಕಂಗೆಡಿಸುತ್ತಿದ್ದ ಭಾರತ ಇವತ್ತು ಆಸೀಸ್ ಸ್ಪಿನ್ನರ್ ಕೀಫೆ ಎಸೆತ ಕಂಡು ಕಂಗೆಟ್ಟಿತ್ತು. ಕೀಫೆಯ ಕರಾರುವಾಕ್ ದಾಳಿಗೆ ಭಾರತದ ಬಳಿ ಉತ್ತರವೇ ಇರಲಿಲ್ಲ.
11 ರನ್`ಗೆ 7 ವಿಕೆಟ್: ಒಂದು ಹಂತದಲ್ಲಿ 94 ರನ್`ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ 11 ರನ್ ಸೇರಿಸುವಷ್ಟರಲ್ಲಿ ಎಲ್ಲ ವಿಕೆಟ್ ಕಳೆದುಕೊಂಡಿತ್ತು. ಭಾರತದ ಹೀನಾಯ ಸ್ಥಿತಿಗೆ ಕಾರಣವಾಗಿದ್ದು, ಆಸೀಸ್ ಸ್ಪಿನ್ನರ್ ಕೀಫೆ. ಕೇವಲ 19 ಎಸೆತಗಳಲ್ಲಿ ಭಾರತದ 5 ವಿಕೆಟ್ ಕಿತ್ತ ಕೀಫೆ ಭಾರತದ ಬ್ಯಾಟಿಂಗ್ ಬುಡ ಕತ್ತರಿಸಿದರು. ಪ್ರತೀ ಓವರ್`ನಲ್ಲಿ ವಿಕೆಟ್ ಉರುಳಿಸಿದ ಕೀಫೆ ರಾಹುಲ್, ಸಹಾ, ಜಯಂತ್ ಯಾದವ್, ಉಮೇಶ್ ಯಾದವ್, ಅಜಿಂಕ್ಯ ರಹಾನೆ ಪೆವಿಲಿಯನ್ ಹಾದಿ ತೋರಿದರು.