ಬಾಂಗ್ಲಾದೇಶ ವಿರುದ್ಧ ಹರ್ಮನ್ ಪ್ರೀತ್ ಕೌರ್ ಪಡೆಗೆ ಟಿ20 ಸರಣಿ ಗೆಲುವು

Webdunia
ಮಂಗಳವಾರ, 11 ಜುಲೈ 2023 (18:08 IST)
ಢಾಕಾ: ಭಾರತ ಮತ್ತು ಬಾಂಗ್ಲಾದೇಶ ವನಿತೆಯರ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯವನ್ನು ಭಾರತ ರೋಚಕವಾಗಿ 8 ರನ್ ಗಳಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್ ಪಡೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 95 ರನ್ ಗಳಿಸಿತು. ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ 13, ಶಫಾಲಿ ವರ್ಮ 19 ರನ್ ಗಳಿಸಿದರು. ಮಧ್ಯಮ ಕ್ರಮಾಂಕ ಸಂಪೂರ್ಣವಾಗಿ ಕೈ ಕೊಟ್ಟಿತು. ನಾಯಕಿ ಹರ್ಮನ್ ಶೂನ್ಯಕ್ಕೆ ನಿರ್ಗಮಿಸಿದರೆ ಜೆಮಿಮಾ ರೊಡ್ರಿಗಸ್ 8, ಯಶಿಕಾ ಭಾಟಿಯಾ 11, ಹರ್ಲಿನ್ ಡಿಯೋಲ್ 6, ದೀಪ್ತಿ ಶರ್ಮಾ 10 ರನ್ ಗಳಿಸಿದರು. ಅಮನ್ಜೋತ್ 14 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಬಾಂಗ್ಲಾ 20 ಓವರ್ ಗಳಲ್ಲಿ 87 ರನ್ ಗಳಿಗೆ ಆಲೌಟ್ ಆಗುವ ಮೂಲಕ ವೀರೋಚಿತ ಸೋಲು ಅನುಭವಿಸಿತು. ನಾಯಕಿ ನಿಗರ್ ಸುಲ್ತಾನಾ 38 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬ್ಯಾಟಿಗರದ್ದು ಏಕಂಕಿ ಕೊಡುಗೆ. ಭಾರತದ ಪರ ದೀಪ್ತಿ ಶರ್ಮ, ಶಫಾಲಿ ವರ್ಮ ತಲಾ 3 ವಿಕೆಟ್ ಕಬಳಿಸಿದರು. ಇದರೊಂದಿಗೆ ಭಾರತ 2-0 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS T20: ಕೊನೆಗೂ ಲಯಕ್ಕೆ ಬಂದ ಭಾರತ, ಸರಣಿ ಸಮಬಲ

ಶ್ರೀಕಾಕುಳಂ ಕಾಲ್ತುಳಿತ: ವೆಂಕಟೇಶ್ವರ್ ಸ್ವಾಮಿ ದೇವಸ್ಥಾನಕ್ಕೆ ಇಂದು ಭಕ್ತರಿಗಿಲ್ಲ ಎಂಟ್ರಿ

INDW vs SAW Final:ಫೈನಲ್ ಪಂದ್ಯಾಟಕ್ಕೆ ವರುಣನ ಆಗಮನ, ಟಾಸ್‌ ವಿಳಂಬ

IND vs AUS T20: ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಭಾರತ ತಂಡದಲ್ಲಿ ಮೂರು ಬದಲಾವಣೆ

Womens World Cup: ಭಾರತದ ವನಿತೆಯರು ವಿಶ್ವಕಪ್‌ ಗೆದ್ದರೆ ₹ 162 ಕೋಟಿ ಬಹುಮಾನ

ಮುಂದಿನ ಸುದ್ದಿ
Show comments