ಹರ್ಮನ್ ಪ್ರೀತ್ ಕೌರ್ ಗೆ ಭಾರೀ ದಂಡ: ಮಹಿಳಾ ಕ್ರಿಕೆಟ್ ತಂಡದ ನಾಯಕಿ ವರ್ತನೆ ಸರೀನಾ?

Webdunia
ಸೋಮವಾರ, 24 ಜುಲೈ 2023 (08:40 IST)
ಢಾಕಾ: ಬಾಂಗ್ಲಾದೇಶ ವಿರುದ್ಧ ಮೊನ್ನೆ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಅಂಪಾಯರ್ ಕಳಪೆ ತೀರ್ಮಾನದ ವಿರುದ್ಧ ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗೆ ಐಸಿಸಿ ಭಾರೀ ದಂಢ ವಿಧಿಸಿದೆ.

ಪಂದ್ಯ ರೋಚಕವಾಗಿದ್ದಾಗ ತಮ್ಮ ವಿರುದ್ಧ ಅಂಪಾಯರ್ ತಪ್ಪಾಗಿ ಔಟ್ ತೀರ್ಪು ನೀಡಿದ್ದು ಹರ್ಮನ್ ಆಕ್ರೋಶಕ್ಕೆ ಕಾರಣವಾಗಿತ್ತು. ಮೈದಾನದಲ್ಲೇ ಬ್ಯಾಟ್ ನಿಂದ ವಿಕೆಟ್ ಗೆ ಹೊಡೆದು ಕೆಳಗುರುಳಿಸಿದ್ದಲ್ಲದೆ, ಅಂಪಾಯರ್ ನಿಂದಿಸುತ್ತಾ ಮೈದಾನದಿಂದ ಹೊರಗೆ ಬಂದಿದ್ದರು.

ಇದು ಇಷ್ಟಕ್ಕೇ ನಿಂತಿರಲಿಲ್ಲ. ಬಾಂಗ್ಲಾದೇಶ ಮತ್ತು ಭಾರತ ನಾಯಕಿಯರು ಟ್ರೋಫಿ ಜೊತೆ ಪೋಸ್ ನೀಡಲು ಹೇಳಿದಾಗ ಬಾಂಗ್ಲಾ ನಾಯಕಿ ನಿಗರ್ ಸುಲ್ತಾನಗೆ ನೀವು ಮಾತ್ರ ಯಾಕಿದ್ದೀರಿ? ನಿಮಗೆ ಪಂದ್ಯ ಟೈ ಮಾಡಿಸಿಕೊಟ್ಟ ಅಂಪಾಯರ್ ನ್ನೂ ಪೋಸ್ ಕೊಡಲು ಕರೆಯಿರಿ ಎಂದು ಟಾಂಗ್ ನೀಡಿದ್ದಾರೆ ಎಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ಬಾಂಗ್ಲಾ ನಾಯಕಿ ತಮ್ಮ ಆಟಗಾರರನ್ನು ಕರೆದುಕೊಂಡು ಪೆವಿಲಿಯನ್ ಗೆ ತೆರಳಿದ್ದರು. ಹರ್ಮನ್ ವರ್ತನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜೊತೆಗೆ ಐಸಿಸಿ ಪಂದ್ಯದ ಸಂಭಾವನೆಯಲ್ಲಿ ಶೇ.75 ರಷ್ಟು ದಂಡ ಮತ್ತು 3 ಡಿಮೆರಿಟ್ ಪಾಯಿಂಟ್ ಗಳನ್ನೂ ನೀಡಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಟಾಸ್ ಗೆದ್ದ ಆಸ್ಟ್ರೇಲಿಯಾ, ಮೊದಲು ಬ್ಯಾಟಿಂಗ್ ಮಾಡ್ತಿರೋದು ಯಾರು

ಒಲಿಂಪಿಕ್ಸ್ ಅವಕಾಶ ಕಳೆದುಕೊಂಡ ಪಾಕಿಸ್ತಾನ: ಯಾವೆಲ್ಲಾ ತಂಡಗಳು ಆಯ್ಕೆ

ಸಾಕಪ್ಪಾ ಸಾಕು.. ಮೀಡಿಯಾ ಕಂಡು ಗೆಳೆಯನ ಜೊತೆ ಎಸ್ಕೇಪ್ ಆದ ಸ್ಮೃತಿ ಮಂಧಾನ

IND vs AUS: ಸರಣಿ ಗೆಲ್ಲಲು ಟೀಂ ಇಂಡಿಯಾಗೆ ಇಂದು ಅದ್ಭುತ ಅವಕಾಶ

ಮೊಹಮ್ಮದ್ ಶಮಿಗೆ ಸುಪ್ರೀಂ ನೋಟಿಸ್: ವೃತ್ತಿ ಜೀವನದ ಬಳಿಕ ವೈಯಕ್ತಿಕ ಜೀವನದಲ್ಲೂ ಸಂಕಷ್ಟ

ಮುಂದಿನ ಸುದ್ದಿ
Show comments