ಲೋಧಾ ಸಮಿತಿಯ ಸುಧಾರಣೆ ನೀತಿ ಜಾರಿಗೆ ಅಡ್ಡಿಯಾಗಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಅನುರಾಗ್ ಠಾಕೂರ್, ಒಂದು ವೇಳೆ, ನಿವೃತ್ತ ನ್ಯಾಯಮೂರ್ತಿಗಳ ಆಧೀನದಲ್ಲಿ ಕ್ರಿಕೆಟ್ ಕ್ಷೇತ್ರ ಉಜ್ವಲವಾಗಲಿದೆ ಎಂದು ಸುಪ್ರೀಂಕೋರ್ಟ್ ಭಾವಿಸಿದಲ್ಲಿ, ಕೋರ್ಟ್‌ಗೆ ಶುಭಕೋರುತ್ತೇನೆ ಎಂದು ಟಾಂಗ್ ನೀಡಿದ್ದಾರೆ.
ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಬಿಸಿಸಿಐನಲ್ಲಿ ಕಡ್ಡಾಯವಾಗಿ ಜಾರಿಗೆ ತರುವಲ್ಲಿ ವಿಫಲವಾಗಿದ್ದರಿಂದ ಸುಪ್ರೀಂಕೋರ್ಟ್, ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆಯವರನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ದೇಶದಲ್ಲಿ ಬಿಸಿಸಿಐ ತನ್ನದೇ ಆದ ಘನತೆ ಗೌರವ ಉಳಿಸಿಕೊಳ್ಳುತ್ತದೆ ಎನ್ನುವ ವಿಶ್ವಾಸವಿದೆ. ಇದು ನನ್ನ ವೈಯಕ್ತಿಕ ಹೋರಾಟವಲ್ಲ. ಕ್ರೀಡಾಮಂಡಳಿ ಸ್ವಾಯತ್ತತೆ ಕುರಿತಂತೆ ಹೋರಾಟ ಇದಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕರಂತೆ ನಾನೂ ಕೂಡಾ ಸುಪ್ರೀಂಕೋರ್ಟ್‌ನ್ನು ಗೌರವಿಸುತ್ತೇನೆ. ಒಂದು ವೇಳೆ, ನಿವೃತ್ತ ನ್ಯಾಯಮೂರ್ತಿಗಳ ಆಧೀನದಲ್ಲಿ ಕ್ರಿಕೆಟ್ ಕ್ಷೇತ್ರ ಉಜ್ವಲವಾಗಲಿದೆ ಎಂದು ಸುಪ್ರೀಂಕೋರ್ಟ್ ಭಾವಿಸಿದಲ್ಲಿ, ಕೋರ್ಟ್‌ಗೆ ಶುಭಕೋರುತ್ತೇನೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಅಂತರ್ಜಾಲ ತಾಣದಲ್ಲಿ ವಿಡಿಯೋ ಕ್ಲಿಪ್ ಅಪ್ಲೋಡ್ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್,, ಭಾರತೀಯ ಕ್ರಿಕೆಟ್ ಬೆಳವಣಿಗೆ ಮತ್ತು ಕ್ರೀಡಾಮಂಡಳಿಗಳಿಗೆ ಸ್ವಾಯತ್ತತೆ ಕುರಿತಂತೆ ಇರುವ ಬದ್ಧತೆ ಸದಾ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಕಳೆದ ಮೇ 2016ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವ ಮುನ್ನ ಠಾಕೂರ್ ಜಂಟಿ ಕಾರ್ಯದರ್ಶಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಲ್ಲದೇ 10 ವರ್ಷಗಳ ಕಾಲ ಹಿಮಾಚಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.