ವೆಸ್ಟ್ ಇಂಡೀಸ್ ಆಟಗಾರರಿಗೆ ನಾಲ್ಕು ಟೆಸ್ಟ್ ಸರಣಿಗೆ ಮುನ್ನ ಸ್ಫೂರ್ತಿ, ಪ್ರೇರೇಪಣೆ ಬೇಕಿದ್ದರೆ ಅವರು ತುಂಬಾ ದೂರ ನೋಡಬೇಕಿಲ್ಲ. ಲೆಜೆಂಡರಿ ಸರ್ ವಿವಿಯನ್ ರಿಚರ್ಡ್ಸ್ ತಂಡದ ಅಭ್ಯಾಸ ಸೆಷನ್‌ನಲ್ಲಿ ಭೇಟಿ ಮಾಡಿದ್ದರು. ಹಿಂದೊಮ್ಮೆ ವೆಸ್ಟ್ ಇಂಡೀಸ್ ಸ್ವದೇಶದಲ್ಲಿ ಅಜೇಯರಾಗಿ ಉಳಿದಿದ್ದರು. ಆದರೆ ಕ್ಯಾರಿಬಿಯನ್ ದೈತ್ಯರ ಶಕ್ತಿ ಮುಂಚಿನಂತಿರದೇ ಬದಲಾಗಿದೆ. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅವರು 8ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಬಾಂಗ್ಲಾ ಮತ್ತು ಜಿಂಬಾಬ್ವೆಗಿಂತ ಸ್ವಲ್ಪ ಮೇಲಿದೆ. ಭಾರತ ಆಸ್ಟ್ರೇಲಿಯಾದ ಹಿಂದೆ ಎರಡನೇ ಸ್ಥಾನದಲ್ಲಿದೆ. ಇದರಿಂದ ಇದು ಒನ್ ಸೈಡ್ ವ್ಯವಹಾರವಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ವಿಂಡೀಸ್ ಕಾಗದದಲ್ಲಿ ಕಠಿಣ ಎದುರಾಳಿಯಾಗಿರದೇ ಇರಬಹುದು. ಆದರೆ 3-1 ಅಥವಾ 2-0 ಜಯದಿಂದ ಕೂಡ ಭಾರತ ಪಾಯಿಂಟ್ ಕಳೆದುಕೊಳ್ಳಬಹುದು. ಏಕೆಂದರೆ ವಿಂಡೀಸ್ ಸದ್ಯಕ್ಕೆ ಕಡಿಮೆ ಶ್ರೇಯಾಂಕ ಹೊಂದಿದೆ.
ಟೆಸ್ಟ್ ಸರಣಿಯಲ್ಲಿ ನಿಧಾನಗತಿಯ ಪಿಚ್ ನಿರೀಕ್ಷಿಸಲಾಗಿದ್ದು, ಸ್ಪಿನ್ನರ್‌ಗಳಿಗೆ ನಿಯಂತ್ರಣಕ್ಕೆ ಸಿಗಬಹುದು. ಅಶ್ವಿನ್, ಅಮಿತ್ ಮಿಶ್ರಾ ಮತ್ತು ಜಡೇಜಾ ತ್ರಯರು ಸ್ಪಿನ್ ಮೋಡಿಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಟೀಂ ಇಂಡಿಯಾ ಮತ್ತು ಕುಂಬ್ಳೆ ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳದೇ ಎಲ್ಲಾ ಮೂರು ವಿಭಾಗಗಳಲ್ಲಿ ಪ್ರದರ್ಶನ ಚೇತರಿಕೆಯ ಗುರಿ ಹೊಂದಿದೆ.