ಢಾಕಾ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಮಹಿಳೆಯರ ಏಷ್ಯಾ ಕಪ್ ಫೈನಲ್ ಪಂದ್ಯ ನಡೆಯಲಿದೆ.
ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡಕ್ಕೆ ಈ ಬಾರಿ ಏಷ್ಯಾ ಕಪ್ ಗೆಲ್ಲಲು ಹೆಚ್ಚಿನ ಅವಕಾಶವಿದೆ. ಇದುವರೆಗೆ ನಡೆದ ಎಲ್ಲಾ ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್ ನಲ್ಲಿರುವ ಹರ್ಮನ್ ಪಡೆ ಈ ಬಾರಿ ಏಷ್ಯಾ ಚಾಂಪಿಯನ್ ಆಗಬಹುದು ಎಂಬ ನಿರೀಕ್ಷೆ ಭಾರತೀಯರದ್ದು.
ಭಾರತ ಸತತ ಎಂಟನೇ ಬಾರಿಗೆ ಫೈನಲ್ ತಲುಪಿದ್ದು, ಏಳನೇ ಬಾರಿಗೆ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಪಂದ್ಯ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ.
-Edited by Rajesh Patil