Select Your Language

Notifications

webdunia
webdunia
webdunia
webdunia

ಭಾರತದ ಬ್ಯಾಟಿಂಗ್ ಲೈನ್‌ಅಪ್ ಜಗತ್ತಿನಲ್ಲೇ ಪ್ರಬಲ : ಬ್ರಾತ್‌ವೈಟ್

ಭಾರತದ ಬ್ಯಾಟಿಂಗ್ ಲೈನ್‌ಅಪ್ ಜಗತ್ತಿನಲ್ಲೇ ಪ್ರಬಲ : ಬ್ರಾತ್‌ವೈಟ್
ಬಾರ್ಬಡೋಸ್: , ಶುಕ್ರವಾರ, 15 ಜುಲೈ 2016 (16:09 IST)
ಭಾರತ ಸದೃಢ ಬ್ಯಾಟಿಂಗ್ ಲೈನ್‌ಅಪ್ ಹೊಂದಿದ್ದು, ಭಾರತದ ಸ್ಪಿನ್ನರುಗಳ ವಿರುದ್ಧ ಆಡುವುದು ಅಷ್ಟೇ ಕಠಿಣವಾಗಿದೆ ಎಂದು ವೆಸ್ಟ್ ಇಂಡೀಸ್ ಆಲ್‌ರೌಂಡರ್ ಕಾರ್ಲೋಸ್ ಬ್ರಾತ್‌ವೈಟ್ ಅಭಿಪ್ರಾಯಪಟ್ಟರು.  ಅವರ ಬ್ಯಾಟಿಂಗ್ ಲೈನ್‌ಅಪ್ ಜಗತ್ತಿನಲ್ಲೇ ಅತೀ ಪ್ರಬಲ ಬ್ಯಾಟಿಂಗ್ ಲೈನ್‌ಅಪ್‌ನಿಂದ ಕೂಡಿದ್ದು, ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್ ನಮಗೆ ಕ್ಯಾರಿಬಿಯನ್‌ನಲ್ಲಿ ಭಾರತಕ್ಕೆ ಹೋಲಿಕೆಯಾಗುವ ಪರಿಸ್ಥಿತಿಯಿದೆ ಎಂದು ಬ್ರಾತ್‌ವೈಟ್ ತಿಳಿಸಿದರು.
 
 ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸಣ್ಣ ದಾಪುಗಾಲು ಹಾಕಿರುವ ಬಗ್ಗೆ ಬ್ರಾತ್‌ವೈಟ್ ಗಮನಸೆಳೆದು, ಈ ಸರಣಿಯಲ್ಲಿ ಮೇಲುಗೈ ಪ್ರಗತಿ ಮುಂದುವರಿಸಬೇಕೆಂದು ಆಶಿಸಿದರು. ವೆಸ್ಟ್ ಇಂಡೀಸ್ ಪಿಚ್‌ಗಳು ನಿಧಾನಗತಿಯಲ್ಲಿದ್ದು ಭಿನ್ನವಾದ ರೀತಿಯಲ್ಲಿ  ದಾಳಿ ಮಾಡಬೇಕಾಗುತ್ತದೆ ಎಂದು ಅವರು ಭಾವಿಸಿದರು.
 
 ಭಾರತ ಸ್ಪಿನ್ ಮೂಲಕ ದಾಳಿ ಮಾಡಿದರೆ, ಆಸೀಸ್ ಪೇಸ್ ದಾಳಿ ಮಾಡುತ್ತದೆ. ಆದರೆ ಸ್ಪಿನ್ ಬೌಲಿಂಗ್ ಮುಂಚಿನ ಕೆಲವು ಸರಣಿಗಳಲ್ಲಿ ನಮ್ಮ ಪತನಕ್ಕೆ ಕಾರಣವಾಗಿದೆ. ಆದರೆ ಈಗ ಕೋಚ್ ಫಿಲ್ ಸಿಮ್ಮನ್ಸ್ ವಿಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಸ್ಪಿನ್ ಆಡುವ ರೀತಿಯ ಬಗ್ಗೆ ಗಮನಹರಿಸಿದ್ದಾರೆ.
 
ಭಾರತ ಉತ್ತಮ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವುದರಿಂದ ಮುಂಬರುವ ಸರಣಿಯಲ್ಲಿ ಸಹನೆಯು ಕೀಲಿಕೈಯಾಗಿದೆ ಎಂದು ಬ್ರಾತ್‌ವೈಟ್ ಅಭಿಪ್ರಾಯಪಟ್ಟರು.  ವೆಸ್ಟ್ ಇಂಡೀಸ್ ಭಾರತದ ವಿರುದ್ಧ 14 ವರ್ಷಗಳಲ್ಲಿ ಟೆಸ್ಟ್ ಪಂದ್ಯ ಗೆದ್ದಿಲ್ಲ. 15 ಪಂದ್ಯಗಳ ಪೈಕಿ 8ರಲ್ಲಿ ಸೋತಿದ್ದು, ಏಳರಲ್ಲಿ ಡ್ರಾ ಮಾಡಿಕೊಂಡಿದೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವೀಣ ಆಮ್ರೆ, ರಘುರಾಮ್ ಭಟ್ ಹಿತಾಸಕ್ತಿ ಸಂಘರ್ಷದ ಸುಳಿಯಲ್ಲಿ