Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿ ಫೈನಲ್`ನಲ್ಲಿ ನಾಳೆ ಭಾರತ-ಪಾಕಿಸ್ತಾನ ಕದನ

ಚಾಂಪಿಯನ್ಸ್ ಟ್ರೋಫಿ
ನಾಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ನಡೆಯುತ್ತಿದೆ. ಲೀಗ್ ಮ್ಯಾಚ್`ನಲ್ಲಿ ಪಾಕಿಸ್ತಾನವನ್ನ ಬಗ್ಗುಬಡಿದಿರುವ ಭಾರತ ತಂಡ ನಾಳೆ ಓವಲ್`ನಲ್ಲೂ ವಿಜಯ ಪತಾಕೆ ಹಾರಿಸಿ ಟ್ರೋಫಿ ಎತ್ತಿಹಿಡಿಯಲು ಸಜ್ಜಾಗಿದೆ.

ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದ 2007ರ ಟಿ-20 ಫೈನಲ್`ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಭಾರತ ತಂಡ 5 ರನ್`ನಿಂದ ಆ ಪಂದ್ಯ ಗೆದ್ದು ಟ್ರೋಫಿ ಎತ್ತಿಹಿಡಿದಿತ್ತು. ಐಸಿಸಿ ಟೂರ್ನ ಮೆಂಟ್`ನಲ್ಲಿ ಪಾಕಿಸ್ತಾನದ ವಿರುದ್ಧ ಅತಿ ಹೆಚ್ಚು ಬಾರಿ ಮೇಲುಗೈ ಸಾಧಿಸಿರುವ ಭಾರತ ತಂಡ ನಾಳೆಯೂ ಗೆಲ್ಲುವ ಫೇವರೀಟ್ ತಂಡವಾಗಿದೆ.

ಸೆಮಿಫೈನಲ್ ಆಡಿದ ತಂಡವನ್ನೇ ವಿರಾಟ್ ಕೊಹ್ಲಿ ನಾಳೆಯೂ ಕಣಕ್ಕಿಳಿಸುವ ಸಾಧ್ಯತೆ ಇದೆ. ಸ್ಪಿನ್ನರ್ ಅಶ್ವಿನ್ ಅಷ್ಟಾಗಿ ಪರಿಣಾಮಕಾರಿಯಾಗದಿರುವ ಹಿನ್ನೆಲೆಯಲ್ಲಿ ಅಶ್ವಿನ್ ಸ್ಥಾನಕ್ಕೆ ಉಮೇಶ್ ಯಾದವ್ ಕರೆತರುವ ಸಾಧ್ಯತೆ ಇದೆ. ಬುಮ್ರಾ, ಭುವಿ, ಕೇದಾರ್ ಜಾಧವ್  ಉತ್ತಮ ಬೌಲಿಂಗ್ ಮಾಡುತ್ತಿರುವುದು ಕೊಹ್ಲಿಗೆ ಮತ್ತಷ್ಟು ಬಲ ನೀಡಿದೆ. ಟಾಪ್ ಆರ್ಡರ್ ಬ್ಯಾಟ್ಸ್`ಮನ್`ಗಳು ಅತ್ಯುತ್ತಮ ಫಾರ್ಮ್ ನಲ್ಲಿದ್ದು, ನಾಯಕ ವಿರಾಟ್ ಕೊಹ್ಲಿ ಸಹ ಉತ್ತಮ ಫಾರ್ಮ್`ನಲ್ಲಿದ್ಧಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಫೈನಲ್ ಫೈಟ್`ಗೆ ಸಜ್ಜಾಗಿರುವ ಕೊಹ್ಲಿ ಬಗ್ಗೆ ಡಿವಿಲಿಯರ್ಸ್ ಹೇಳಿದ್ದೇನು ಗೊತ್ತಾ..?