Select Your Language

Notifications

webdunia
webdunia
webdunia
webdunia

ಐವರು ತಜ್ಞ ಬೌಲರುಗಳೊಂದಿಗೆ ಭಾರತದ ಬೌಲಿಂಗ್ ದಾಳಿ: ವಿರಾಟ್ ಕೊಹ್ಲಿ

ಐವರು ತಜ್ಞ ಬೌಲರುಗಳೊಂದಿಗೆ ಭಾರತದ ಬೌಲಿಂಗ್ ದಾಳಿ: ವಿರಾಟ್ ಕೊಹ್ಲಿ
ಆಂಟಿಗುವಾ , ಗುರುವಾರ, 21 ಜುಲೈ 2016 (09:59 IST)
ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಟೆಸ್ಟ್ ಸರಣಿಯಲ್ಲಿ ಐವರು ತಜ್ಞ ಬೌಲರುಗಳೊಂದಿಗೆ ಆಕ್ರಮಣಕಾರಿ ಕ್ರಿಕೆಟ್ ಆಡಲು ಭಾರತ ತಂಡ ಎದುರುನೋಡುತ್ತಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ನಾನು ಐವರು ಬೌಲರುಗಳ ಜತೆ ಆಡುವುದರ ಪರವಾಗಿದ್ದೇನೆ. ನಾವು ಹೆಚ್ಚು ಬ್ಯಾಟ್ಸ್‌ಮನ್‍ಗಳೊಂದಿಗೆ ಆಡಿದರೆ ಟೆಸ್ಟ್‌ನಲ್ಲಿ 700 ರನ್ ಸ್ಕೋರ್ ಮಾಡಬಹುದಾದರೂ ಅದು ನೆರವಾಗುವುದಿಲ್ಲ. ನಾವು ಟೆಸ್ಟ್ ಪಂದ್ಯ ಗೆಲ್ಲುವುದಕ್ಕೆ 20 ವಿಕೆಟ್ ಕಬಳಿಸಬೇಕಾದ ಅಗತ್ಯವಿದೆ.

ಆದ್ದರಿಂದ ನಮ್ಮ ಟಾಪ್ ಐವರು ಬ್ಯಾಟ್ಸ್‌ಮನ್ ಮತ್ತು ವಿಕೆಟ್‌ಕೀಪರ್ ದೊಡ್ಡ ಜವಾಬ್ದಾರಿ ತೆಗೆದುಕೊಂಡು ದೊಡ್ಡ ಸ್ಕೋರನ್ನು ಮಾಡಿದರೆ ನಾವು ಅವರನ್ನು ಎರಡು ಬಾರಿ ಆಲೌಟ್ ಮಾಡಬಹುದು ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಹೇಳಿದರು.
 
ನಾವು ಸಾಕಷ್ಟು ರನ್‌ಗಳನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಸ್ಕೋರ್ ಮಾಡಿದರೆ, ಎರಡನೇ ಬಾರಿಗೆ ನಾವು ಸುದೀರ್ಘ ಕಾಲ ಬ್ಯಾಟಿಂಗ್ ಮಾಡುವ ಅಗತ್ಯವಿರುವುದಿಲ್ಲ. ಇದು ಕಳೆದ ಎರಡು ಸೀಸನ್‌ಗಳಿಗೆ ನಮ್ಮ ಮನಸ್ಥಿತಿಯಾಗಿದೆ. ಅದೇ ಮನಸ್ಥಿತಿಯಿಂದ ನಾವು ಸರಣಿಯನ್ನು ಆರಂಭಿಸಲು ಬಯಸಿದ್ದು, ನಮ್ಮ ಬೌಲಿಂಗ್ 20 ವಿಕೆಟ್ ಕಬಳಿಸುವಷ್ಟು ಪ್ರಬಲವಾಗಿರಬೇಕು ಎಂದು ಕೊಹ್ಲಿ ಹೇಳಿದರು.
 
ನನ್ನ ಮನಸ್ಸಿನಲ್ಲಿ ತಂಡದ ಸಂಯೋಜನೆಯಿದ್ದು, ಅದನ್ನು ಈಗಲೇ ಬಹಿರಂಗ ಮಾಡಲು ಸಾಧ್ಯವಿಲ್ಲ. ಮೊದಲ ಟೆಸ್ಟ್‌ನಿಂದಲೇ ನಾವು ದಾಳಿ ಮಾಡುವ ಅಗತ್ಯವಿದ್ದು, ನಮ್ಮ ಪ್ರಬಲ ಬೌಲಿಂಗ್ ಘಟಕ ಅದನ್ನು ನೆರವೇರಿಸುತ್ತದೆ ಎಂದು ಕೊಹ್ಲಿ ಹೇಳಿದರು. ನನ್ನ ಪ್ರಕಾರ ತಂಡದ ಸಂಯೋಜನೆಯು ಪಿಚ್ ಮೇಲೆ ಅವಲಂಬಿಸಿದೆ. ವಿಕೆಟ್ ಯಾವ ರೀತಿ ವರ್ತಿಸುತ್ತದೆ ಎನ್ನುವ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡುವುದರಲ್ಲಿ ನಾವು ತಜ್ಞರಾಗಿದ್ದೇವೆ ಎಂದು ಕೊಹ್ಲಿ ನುಡಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ರಿಯೊ ಒಲಿಂಪಿಕ್ಸ್‌ನಿಂದ ರಷ್ಯಾ ನಿಷೇಧಕ್ಕೆ ಒಂದು ವಾರದಲ್ಲಿ ತೀರ್ಮಾನ