Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಟಿ20 ಸರಣಿ ಇಂದಿನಿಂದ ಶುರು

ಭಾರತ-ಇಂಗ್ಲೆಂಡ್ ಟಿ20 ಸರಣಿ ಇಂದಿನಿಂದ ಶುರು
ಅಹಮ್ಮದಾಬಾದ್ , ಶುಕ್ರವಾರ, 12 ಮಾರ್ಚ್ 2021 (08:46 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಬಳಿಕ ಈಗ ಉಭಯ ತಂಡಗಳು ಕಿರು ಮಾದರಿಯ ಕ್ರಿಕೆಟ್ ಗೆ ರೆಡಿಯಾಗಿವೆ. ಇಂದಿನಿಂದ ಟಿ20 ಸರಣಿ ಆರಂಭವಾಗಲಿದೆ.


ಎಲ್ಲಾ ಪಂದ್ಯಗಳು ವಿಶ್ವದ ಬೃಹತ್ ಕ್ರೀಡಾಂಗಣ ಅಹಮ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಇಂದು ಮೊದಲ ಪಂದ್ಯ ನಡೆಯಲಿದ್ದು, ಟೆಸ್ಟ್ ಸರಣಿಯಲ್ಲಿ ಹೋದ ಮಾನ ಮರಳಿ ಪಡೆಯಲು ಇಂಗ್ಲೆಂಡ್ ಪ್ರಯತ್ನಿಸಲಿದೆ.

ಅತ್ತ ಟೀಂ ಇಂಡಿಯಾ ವಿರಾಟ್ ಕೊಹ್ಲಿಗೆ ಇದು ಫಾರ್ಮ್ ಕಳೆದುಕೊಳ್ಳಲು ಇದು ಉತ್ತಮ ವೇದಿಕೆಯಾಗಲಿದೆ. ಆದರೆ ಆಡುವ 11 ರ ಬಳಗವನ್ನು ಆಯ್ಕೆ ಮಾಡುವುದು ಅವರ ಪಾಲಿಗೆ ತಲೆನೋವಾಗಲಿದೆ. ಯಾಕೆಂದರೆ ಪ್ರತಿಯೊಂದು ಸ್ಥಾನಕ್ಕೂ ಸಾಕಷ್ಟು ಆಯ್ಕೆಗಳಿವೆ. ಆದರೆ ಒಬ್ಬರನ್ನು ಬಿಟ್ಟರೆ ಇನ್ನೊಬ್ಬರಿಗೆ ಅನ್ಯಾಯವಾಗುವುದು ಖಚಿತ. ಹೀಗಾಗಿ ನಾಜೂಕಾಗಿ ತಂಡ ಆರಿಸುವುದೇ ದೊಡ್ಡ ತಲೆನೋವಾಗಲಿದೆ.

ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನಾಗಿರುವ ಖುಷಿಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಕೊಹ್ಲಿ