Select Your Language

Notifications

webdunia
webdunia
webdunia
webdunia

ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಇಂದು

ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಇಂದು
ಸಿಡ್ನಿ , ಭಾನುವಾರ, 29 ನವೆಂಬರ್ 2020 (08:12 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ದ್ವಿತೀಯ ಏಕದಿನ ಪಂದ್ಯ ಇಂದು ನಡೆಯಲಿದೆ. ಮೊದಲ ಏಕದಿನ ಪಂದ್ಯ ಸೋತಿರುವ ಟೀಂ ಇಂಡಿಯಾಕ್ಕೆ ಸರಣಿ ಉಳಿಸಿಕೊಳ್ಳಲು ಇಂದಿನ ಪಂದ್ಯ ಗೆಲ್ಲಲೇಬೇಕಾಗಿದೆ.


ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತಕ್ಕೆ ಕಡಿವಾಣ ಹಾಕಲಾರದೇ ಟೀಂ ಇಂಡಿಯಾ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಭಾರತ ಗೆಲ್ಲಬೇಕಾದರೆ ಆಸ್ಟ್ರೇಲಿಯಾದ ಸಬಲ ಬ್ಯಾಟಿಂಗ್ ಗೆ ಕಡಿವಾಣ ಹಾಕಲೇಬೇಕು. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗಬೇಕಿರುವ ಶ್ರೇಯಸ್ ಐಯರ್, ಕೆಎಲ್ ರಾಹುಲ್ ರಿಂದ ಉತ್ತಮ ಜತೆಯಾಟ ಬೇಕು. ಭಾರತಕ್ಕಿರುವ ಇನ್ನೊಂದು ದೊಡ್ಡ ತಲೆನೋವೆಂದರೆ ವಿರಾಟ್ ಕೊಹ್ಲಿ ಫಾರ್ಮ್. ಐಪಿಎಲ್ ನ ಕಳಪೆ ಫಾರ್ಮ್ ನ್ನು ಕೊಹ್ಲಿ ಇಲ್ಲೂ ಮುಂದುವರಿಸಿದ್ದು ಅವರು ರನ್ ಗಳಿಸದೇ ಇದ್ದರೆ ದೊಡ್ಡ ಮೊತ್ತ ಗಳಿಸುವುದು ಕಷ್ಟವಾಗಲಿದೆ. ಪಂದ್ಯ ಭಾರತೀಯ ಸಮಯ ಬೆಳಿಗ್ಗೆ 9.10 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂಜಿಲೆಂಡ್ ಪ್ರವಾಸಗೈದ ಪಾಕ್ ಕ್ರಿಕೆಟ್ ತಂಡದಲ್ಲಿ ಸಾಲು ಸಾಲು ಕೊರೋನಾ ಕೇಸ್