ವಿಶಾಖಪಟ್ಟಣ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದು ಕೇವಲ 117 ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಆಸೀಸ್ ಬೌಲರ್ ಗಳು ಎದುರಾಳಿಗಳನ್ನು ಉಸಿರೆತ್ತದಂತೆ ನೋಡಿಕೊಂಡರು. ವಿರಾಟ್ ಕೊಹ್ಲಿ 31, ಅಕ್ಸರ್ ಪಟೇಲ್ ಅಜೇಯ 29 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ವಿಫಲರಾದರು. ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದಲ್ಲೂ ಶೂನ್ಯಕ್ಕೆ ನಿರ್ಗಮಿಸಿದ್ದರು. ಅದನ್ನೇ ಇಲ್ಲೂ ಮುಂದುವರಿಸಿದರು.
ಒಂದೇ ಇನಿಂಗ್ಸ್ ನಲ್ಲಿ ಒಟ್ಟು ನಾಲ್ವರು ಬ್ಯಾಟಿಗರು ಡಕೌಟ್ ಆಗಿ ಬೇಡದ ದಾಖಲೆ ಮಾಡಿದರು. ಶುಬ್ಮನ್ ಗಿಲ್, ಸೂರ್ಯಕುಮಾರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಶೂನ್ಯಕ್ಕೆ ನಿರ್ಗಮಿಸಿದವರು. ಇದಕ್ಕೂ ಮೊದಲು ಭಾರತ ಐದು ಬಾರಿ ನಾಲ್ವರು ಡಕೌಟ್ ಆದ ಅವಮಾನ ಅನುಭವಿಸಿತ್ತು. ಕೊನೆಯದಾಗಿ ಈ ರೀತಿ ಆಗಿದ್ದು 2017 ರಲ್ಲಿ ಶ್ರೀಲಂಕಾ ವಿರುದ್ಧ. ಇಂದಿನ ಪಂದ್ಯದಲ್ಲಿ ಆಸೀಸ್ ಪರ ಮಿಚೆಲ್ ಸ್ಟಾರ್ಕ್ 5 ವಿಕೆಟ್ ಕಬಳಿಸಿದರು. ಇದೀಗ ಆಸೀಸ್ ಗೆಲ್ಲಲು 118 ರನ್ ಗಳಿಸಿದರೆ ಸಾಕಾಗಿದೆ.