Daily Horoscope

Select Your Language

Notifications

webdunia
webdunia
webdunia
webdunia

IND vs SL:ಥ್ಯಾಂಕ್ಸ್ ಮಗಾ… ಬಚಾವ್ ಮಾಡಿದ ಗೆಳೆಯ ದೇವದತ್ ಪಡಿಕ್ಕಲ್ ಗೆ ಮೈದಾನದಲ್ಲೇ ತಬ್ಬಿ ಕಿಸ್ ಕೊಟ್ಟ ಕೆಎಲ್ ರಾಹುಲ್ Video

KL Rahul-Devdutt Padikkal
Photo Credit: X
ಗಾಲೆ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ತನ್ನನ್ನು ಬಚಾವ್ ಮಾಡಿದ ಗೆಳೆಯ ದೇವದತ್ ಪಡಿಕ್ಕಲ್ ಗೆ ಕೆಎಲ್ ರಾಹುಲ್ ಮೈದಾನದಲ್ಲೇ ತಬ್ಬಿ ಕಿಸ್ ಮಾಡಿ ಫನ್ನಿ ವಿಡಿಯೋ ವೈರಲ್ ಆಗಿದೆ.

ಭಾರತ ಮೊದಲ ಇನಿಂಗ್ಸ್ ನಲ್ಲಿ 426 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಲಂಕಾ 284 ರನ್ ಗೆ ಆಲೌಟ್ ಆಗಿತ್ತು. ಬರೋಬ್ಬರಿ 178 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಮತ್ತೆ ಕರ್ನಾಟಕದ ಕಲಿಗಳಾದ ಕೆಎಲ್ ರಾಹುಲ್-ದೇವದತ್ ಪಡಿಕ್ಕಲ್ ನೆರವಾದರು.

ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟಾದ ಬಳಿಕ ಕ್ರೀಸ್ ಆಕ್ರಮಿಸಿಕೊಂಡ ಕೆಎಲ್-ಡಿಪಿ ಜೋಡಿ 65 ರನ್ ಗಳ ಜೊತೆಯಾಟವಾಡಿ ಚೇತರಿಕೆ ನೀಡಿತು. ಈ ಪೈಕಿ ರಾಹುಲ್ 35, ಪಡಿಕ್ಕಲ್ 44 ರನ್ ಗಳಿಸಿ ಔಟಾದರು.

ಈ ನಡುವೆ ರಾಹುಲ್ ವಿರುದ್ಧ ಅಂಪಾಯರ್ ತಪ್ಪಾಗಿ ಎಲ್ ಬಿಡಬ್ಲ್ಯು ತೀರ್ಪು ನೀಡಿದ್ದರು. ಈ ವೇಳೆ ಇನ್ನೊಂದು ತುದಿಯಲ್ಲಿದ್ದ ಪಡಿಕ್ಕಲ್ ಡಿಆರ್ ಎಸ್ ತೆಗೆದುಕೊಳ್ಳುವಂತೆ ಸೂಚಿಸಿದರು. ಕೊನೆಗೆ ಥರ್ಡ್ ಅಂಪಾಯರ್ ರಿವ್ಯೂ ನೋಡಿದಾಗ ರಾಹುಲ್ ನಾಟೌಟ್ ಆಗಿದ್ದರು. ಈ ವೇಳೆ ಖುಷಿಯಾದ ರಾಹುಲ್ ದೇವದತ್ ರನ್ನು ತಬ್ಬಿಕೊಂಡು ಕಿಸ್ ಮಾಡಿದರು. ಈ ಫನ್ನಿ ವಿಡಿಯೋ ಇಲ್ಲಿದೆ ನೋಡಿ.

pic.twitter.com/FgxBhCxufh

 

— Ak (@AkashRa29975360) August 18, 2026

Share this Story:

Follow Webdunia kannada

ಮುಂದಿನ ಸುದ್ದಿ

IND vs SL: ಕ್ಯಾಪ್ಟನ್ ಅಂದ್ರೆ ಹೀಗಿರಬೇಕು… ಶುಭಮನ್ ಗಿಲ್ ಪಡೆದ ಈ ಅದ್ಭುತ ಕ್ಯಾಚ್ ನೋಡಿ ಕಣ್ತುಂಬಿಕೊಳ್ಳಬೇಕು