IND vs NZ Test: ಚಿನ್ನಸ್ವಾಮಿ ಮೈದಾನ ಮಳೆಯಿಂದ ಒದ್ದೆ, ಇಂದಿನ ಪಂದ್ಯಕ್ಕೆ ಕಾರ್ಮೋಡ

Krishnaveni K
ಬುಧವಾರ, 16 ಅಕ್ಟೋಬರ್ 2024 (09:49 IST)
Photo Credit: X
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಭಾರೀ ಮಳೆಯಿಂದಾಗಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಆರಂಭವಾಗಬೇಕಾಗಿದ್ದ ಟೆಸ್ಟ್ ಪಂದ್ಯ ಇನ್ನೂ ಆರಂಭವಾಗಿಲ್ಲ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಭಾರೀ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ನಿನ್ನೆಯಷ್ಟು ಮಳೆ ಇಲ್ಲವಾದರೂ ಇಂದೂ ತುಂತುರು ಮಳೆ, ದಟ್ಟ ಮೋಡ ಕವಿದ ವಾತಾವರಣ ಮುಂದುವರಿದಿದೆ. ನಿನ್ನೆ ಭಾರೀ ಮಳೆ ಸುರಿದಿದ್ದರಿಂದ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದೆ.

ಮೈದಾನ ಒಣಗಿಸಲು ತುಂತುರು ಮಳೆ ಬಿಡುತ್ತಿಲ್ಲ.  ಇದರಿಂದಾಗಿ ಮೈದಾನಕ್ಕೆ ಹಾಕಿರುವ ಕವರ್ಸ್ ತೆಗೆಯಲಾಗಿಲ್ಲ. ಪಿಚ್ ನ್ನು ಮುಚ್ಚಲಾಗಿದ್ದರೂ ಹೊರಾವರಣ ಸಂಪೂರ್ಣವಾಗಿ ಒದ್ದೆಯಾಗಿದೆ. ಇಂದು ಪಂದ್ಯ ನಡೆಯುವ ಸಾಧ್ಯತೆಯಿಲ್ಲ ಎಂಬ ಮುನ್ಸೂಚನೆ ಮೊದಲೇ ಇದ್ದಿದ್ದರಿಂದ ಅಭಿಮಾನಿಗಳು ಮೈದಾನಕ್ಕೆ ಬರುವ ಆಸಕ್ತಿ ತೋರುತ್ತಿಲ್ಲ.

ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಮತ್ತೆ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಈ ಪಂದ್ಯ ನಡೆಯುವುದೇ ಅನುಮಾನ ಎಂಬ ಪರಿಸ್ಥಿತಿಯಿದೆ. ಹಲವು ದಿನಗಳ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಟೆಸ್ಟ್ ಪಂದ್ಯವಾಗುತ್ತಿದೆ. ಆದರೆ ಪಂದ್ಯ ನಡೆಯದೇ ಇರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟಿಕೆಟ್ ಎಲ್ಲಿ ಹೋಯ್ತು.. ಮಹಿಳಾ ವಿಶ್ವಕಪ್ ಫೈನಲ್ ಗೆ ಮುನ್ನ ಅಭಿಮಾನಿಗಳಿಂದ ಭಾರೀ ಆಕ್ರೋಶ

ದಬಂಗ್‌ ಡೆಲ್ಲಿ ತಂಡಕ್ಕೆ ಪ್ರೊ ಕಬಡ್ಡಿ ಲೀಗ್‌ ಕಿರೀಟ: ಫೈನಲ್‌ನಲ್ಲಿ ಮುಗ್ಗರಿಸಿದ ಪಟ್ನಾ ಪೈರೇಟ್ಸ್‌

ಕರ್ನಾಟಕ ದತ್ತುಪುತ್ರ ನಾನು.. ಕನ್ನಡ ರಾಜ್ಯೋತ್ಸವಕ್ಕೆ ದಿನೇಶ್ ಕಾರ್ತಿಕ್ ಹೇಳಿದ್ದೇನು Video

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶ್ರೇಯಸ್ ಅಯ್ಯರ್: ಲೇಟೆಸ್ಟ್ ಹೆಲ್ತ್ ಅಪ್ ಡೇಟ್ ಇಲ್ಲಿದೆ

ಆಸ್ಟ್ರೇಲಿಯಾಕ್ಕೆ ಶನಿ ದೆಸೆ ಶುರುವಾಗಿದ್ದು ಇಲ್ಲಿಂದಲೇ ಅಂತಿದ್ದಾರೆ ಫ್ಯಾನ್ಸ್

ಮುಂದಿನ ಸುದ್ದಿ
Show comments