Daily Horoscope
✕

IND vs ENG test: ಇಂಗ್ಲೆಂಡ್ ಗೆದ್ದು ಸೇಡು ತೀರಿಸಿಕೊಂಡ ಟೀಂ ಇಂಡಿಯಾ

Krishnaveni K
ಸೋಮವಾರ, 5 ಫೆಬ್ರವರಿ 2024 (14:54 IST)
ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 106 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೊದಲ ಟೆಸ್ಟ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ದ್ವಿತೀಯ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಈಗ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ. 399 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಹೊರಟ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 292 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ 106 ರನ್ ಗಳ ಸೋಲು ಕಂಡಿತು. ಭಾರತದ ಪರ ಎರಡೂ ಇನಿಂಗ್ಸ್ ಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ಪಂದ್ಯ ಶ್ರೇಷ್ಠರಾದರು.

ಇಂಗ್ಲೆಂಡ್ ಕುಸಿತಕ್ಕೆ ಕಾರಣವಾದ ಅಶ್ವಿನ್-ಬುಮ್ರಾ
ಕಳೆದ ಪಂದ್ಯದಲ್ಲಿ ಇದೇ ಪರಿಸ್ಥಿತಿಯಿದ್ದರೂ ಇಂಗ್ಲೆಂಡ್ ಯಶಸ್ವಿಯಾಗಿ ರನ್ ಬೆನ್ನಟ್ಟಿತ್ತು. ಆದರೆ ಕಳೆದ ಪಂದ್ಯದಲ್ಲಿ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಟೀಂ ಇಂಡಿಯಾ ಬೌಲಿಂಗ್ ನಡೆಸಿತು. ಅದರಲ್ಲೂ ವಿಶೇಷವಾಗಿ ಅನುಭವಿಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನುಲುಬು ಮುರಿದರು. ಅಶ್ವಿನ್ ಇಂಗ್ಲೆಂಡ್ ನ ಜೋ ರೂಟ್, ಒಲಿ ಪಾಪ್ ಮತ್ತು ಬೆನ್ ಡಕೆಟ್ ರಂತಹ ಪ್ರಮುಖ ವಿಕೆಟ್ ಕಬಳಿಸಿದರೆ, ಕೊನೆಯಲ್ಲಿ ಭಾರತಕ್ಕೆ ಮುಳುವಾಗುವ ಆತಂಕ ಮೂಡಿಸಿದ ಬೆನ್ ಫೋಕ್ಸ್ ಮತ್ತು ಟಾಮ್ ಹಾರ್ಟ್ಲೀ ವಿಕೆಟ್ ಕಬಳಿಸಿ ಬುಮ್ರಾ ಗೆಲುವಿನ ರೂವಾರಿಯಾದರು. ಮೊದಲ ಇನಿಂಗ್ಸ್ ನಲ್ಲಿ ಬುಮ್ರಾ 6 ವಿಕೆಟ್ ಕಬಳಿಸಿದ್ದರು.

ಅಂತಿಮವಾಗಿ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ 3 ವಿಕೆಟ್ ಹಂಚಿಕೊಂಡರೆ ಉಳಿದಂತೆ ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮುಕೇಶ್ ಕುಮಾರ್ ತಲಾ 1 ವಿಕೆಟ್ ಕಬಳಿಸಿದರು. ಭಾರತ ಮೊದಲ ಇನಿಂಗ್ಸ್ ನಲ್ಲಿ 396 ಮತ್ತು ಇಂಗ್ಲೆಂಡ್ 253 ರನ್ ಗಳಿಸಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ 255 ಮತ್ತು ಇಂಗ್ಲೆಂಡ್ 292 ರನ್ ಗಳಿಸಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಹೃದಯವಂತ ನಮ್ಮ ಕೆಎಲ್… ತಮಗೆ ಸಿಕ್ಕ ಸ್ಮಾರ್ಟ್ ಫೋನ್ ಗಿಫ್ಟ್ ಆಗಿ ನೀಡಿದ ಕೆಎಲ್ ರಾಹುಲ್ Video

IND vs NZ 2ನೇ ಏಕದಿನ: ಗುರ್ನೂರ್ ಬ್ರಾರ್ ಭರ್ಜರಿ ಬೌಲಿಂಗ್, ಕೇವಲ 134 ರನ್‌ಗೆ ಕಿವೀಸ್ ಆಲೌಟ್

IND vs NZ: ಸರಿಯಾಗಿ ಶರ್ಟ್ ಹಾಕ್ಕೊಳ್ಳೋಕೂ ಬರಲ್ವಾ… ಕೆಎಲ್ ರಾಹುಲ್ ಪಾಲಿಗೆ ಮೈದಾನದಲ್ಲೇ ತಂದೆಯಾದ ಕೊಹ್ಲಿ Funny Video

ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ದಿಢೀರ್ ವಿದಾಯ: 13 ವರ್ಷಗಳ ರೆಡ್ ಬಾಲ್ ಪ್ರಯಾಣಕ್ಕೆ ಅಂತ್ಯ

ಭಾರತ vs ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯ: ಪಂದ್ಯದ ಸಮಯ, ನೇರ ಪ್ರಸಾರ ವಿವರ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments