Daily Horoscope
✕

IND vs ENG test: ಕುಟುಂಬ ಸಮೇತ ಮೈದಾನಕ್ಕೆ ಬಂದ ರವಿಚಂದ್ರನ್ ಅಶ್ವಿನ್

Krishnaveni K
ಗುರುವಾರ, 7 ಮಾರ್ಚ್ 2024 (11:04 IST)
Photo Courtesy: Twitter
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೂಲಕ 100 ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿರುವ ದಾಖಲೆ ಮಾಡಿರುವ ರವಿಚಂದ್ರನ್ ಅಶ್ವಿನ್ ತಮ್ಮ ಕುಟುಂಬ ಸಮೇತ ಮೈದಾನಕ್ಕೆ ಬಂದಿದ್ದಾರೆ.

ಇಂದಿನ ಪಂದ್ಯಾರಂಭಕ್ಕೆ ಮೊದಲು ಅಶ್ವಿನ್ ಗೆ ಟೀಂ ಇಂಡಿಯಾ ಸ್ಮರಣಿಕೆ, ಕ್ಯಾಪ್ ನೀಡಿ ಗೌರವಿಸಿತು. ಈ ಸಂದರ್ಭದಲ್ಲಿ ಮೈದಾನದಲ್ಲಿ ಅಶ್ವಿನ್ ಪತ್ನಿ ಪ್ರೀತಿ ಅಶ್ವಿನ್ ಮತ್ತು ಇಬ್ಬರು ಮಕ್ಕಳೂ ಜೊತೆಗಿದ್ದರು. ಅಶ್ವಿನ್ ರ ಸಾಧನೆಯನ್ನು ಕೋಚ್ ದ್ರಾವಿಡ್ ಹೊಗಳಿದ್ದಲ್ಲದೆ, ಕುಟುಂಬದವರಿಗೂ ಧನ್ಯವಾದ ಸಲ್ಲಿಸಿದರು. ಬಳಿಕ ಅಶ್ವಿನ್ ಕೂಡಾ ಮಾತನಾಡಿದರು.

ಇಂದಿನ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಫೀಲ್ಡಿಂಗ್ ಮಾಡುತ್ತಿದೆ. ಅಶ್ವಿನ್ ಮೈದಾನಕ್ಕಿಳಿಯುವಾಗ ಭಾರತೀಯ ಕ್ರಿಕೆಟಿಗರು ಸಾಲಾಗಿ ನಿಂತು ಅವರಿಗೆ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಿದರು. 100 ನೇ ಟೆಸ್ಟ್ ಪಂದ್ಯವಾಡುತ್ತಿರುವ 14 ನೇ ಭಾರತೀಯ ಕ್ರಿಕೆಟಿಗ ಅಶ್ವಿನ್.

ವಿಶೇಷವೆಂದರೆ ಇದೇ ಪಂದ್ಯದಲ್ಲಿ ಇಂಗ್ಲೆಂಡ್ ನ ಜಾನಿ ಬೇರ್ ಸ್ಟೋ ಕೂಡಾ 100 ನೇ ಟೆಸ್ಟ್ ಪಂದ್ಯವಾಡುತ್ತಿದ್ದಾರೆ. ಅವರ ಕುಟುಂಬವೂ ಮೈದಾನದಲ್ಲಿ ಉಪಸ್ಥಿತರಿದ್ದರು. ಇಂಗ್ಲೆಂಡ್ ತಂಡವೂ ಜಾನಿ ಬೇರ್ ಸ್ಟೋಗೆ 100 ನೇ ಟೆಸ್ಟ್ ನ ವಿಶೇಷ ಕ್ಯಾಪ್ ನೀಡಿ ಗೌರವಿಸಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

IND vs NZ: ಮೊದಲ ಟೆಸ್ಟ್ ಗೆಲ್ಲಕ್ಕಾಗಲಿಲ್ಲ, ಎರಡನೇ ಟೆಸ್ಟ್ ನಲ್ಲೂ ಸೋಲಿನ ಭೀತಿ: ಮೊದಲು ಗಂಭೀರ್ ಕಿತ್ತೊಗೆಯಿರಿ ಎಂದ ಫ್ಯಾನ್ಸ್

ಭಾರತ vs ನ್ಯೂಜಿಲೆಂಡ್ 2ನೇ ಟೆಸ್ಟ್: ಸಮಯ, ನೇರಪ್ರಸಾರ ಮತ್ತು ಪಿಚ್ ವರದಿ ಇಲ್ಲಿದೆ

ದಾಖಲೆಯ ದ್ವಿಶತಕ ಗಳಿಸುವ ಮುನ್ನ ವೈಭವ್ ಸೂರ್ಯವಂಶಿ ಕರೆ ಮಾಡಿದ ಆ ನಾಲ್ಕು ಮಂದಿ ಯಾರು ಗೊತ್ತಾ Video

ವೈಭವ್ ಸೂರ್ಯವಂಶಿ ವಿಶ್ವದಾಖಲೆ: 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಬ್ಯಾಟಿಂಗ್ ಸೆನ್ಸೇಷನ್ Video

ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments